ಮೈಸೂರು,ಜೂ,24,2020(www.justkannada.in): ನಾಳೆಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಹಿನ್ನೆಲೆ, ಮುಂಜಾಗ್ರತಾ ಕ್ರಮವಹಿಸಲು ಆರೋಗ್ಯ ಇಲಾಖೆ ಸಜ್ಜಾಗಿದೆ ಎಂದು ಡಿಎಚ್ಒ ವೆಂಕಟೇಶ್ ತಿಳಿಸಿದರು.
ಎಸ್ ಎಸ್ ಎಲ್ ಸಿ ಪರೀಕ್ಷೆ ಸಿದ್ಧತೆ ಕುರಿತು ಮಾತನಾಡಿದ ಡಿಎಚ್ಒ ವೆಂಕಟೇಶ್, ಎಲ್ಲಾ 139 ಪರೀಕ್ಷಾ ಕೇಂದ್ರಗಳಿಗೂ ಮೆಡಿಕಲ್ ಟೀಮ್ ಕಳುಹಿಸಲಾಗಿದೆ. ಎಲ್ಲಾ ಟಿಎಚ್ ಒ ಗೆ ಸೂಚನೆ ಕೊಟ್ಟಿದ್ದೇವೆ. ಸೆಂಟರ್ ಸ್ಯಾನಿಟೈಜ್ ಮಾಡುವುದು. ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಾಗಿ ಮಾಡಲಾಗುತ್ತೆ. ಯಾರುಗಾದರು ಜ್ವರ, ನೆಗಡಿ ಕಂಡುಬಂದಲ್ಲಿ N 95 ಮಾಸ್ಕ್ ವಿತರಿಸಿ ಪ್ರತ್ಯೇಕವಾಗಿ ಪರೀಕ್ಷೆ ಬರೆಸಲಾಗುವುದು. ಪರೀಕ್ಷೆ ನಂತರ ಹೆಚ್ವಿನ ತಪಾಸಣೆಗೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಕೊರೋನಾ ಅಟ್ಟಹಾಸದ ನಡುವೆ ರಾಜ್ಯದಲ್ಲಿ ನಾಳೆಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳ ಆರೋಗ್ಯ ದೃಷ್ಠಿಯಿಂದ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಂಡು ಪರೀಕ್ಷೆ ನಡೆಸುತ್ತಿದ್ದು ವಿದ್ಯಾರ್ಥಿಗಳು ಧೈರ್ಯವಾಗಿ ಬಂದು ಪರೀಕ್ಷೆ ಬರೆಯುವಂತೆ ಸಲಹೆ ನೀಡಿದೆ.
Key words: SSLC -examination – tomorrow-Health Department – preemptive- action.