ಬೆಂಗಳೂರು,ಮೇ,8,2023(www.justkannada.in): ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ನಾಲ್ವರು ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ನಾಲ್ವರು ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಗಳಿಸಿ SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ಸ್ ಆಗಿದ್ದಾರೆ. ಬೆಂಗಳೂರಿನ ನ್ಯೂ ಮೆಕಾಲೆ ಶಾಲೆ ವಿದ್ಯಾರ್ಥಿನಿ ಭೂಮಿಕಾ ಪೈ, ಚಿಕ್ಕಬಳ್ಳಾಪುರ ಜಿಲ್ಲೆಯ ಅಗಲಗುರ್ಕಿಯ ಬಿಜಿಎಸ್ ಶಾಲೆ ವಿದ್ಯಾರ್ಥಿ ಯಶಸ್ಗೌಡ, ಸವದತ್ತಿ ಶ್ರೀಕುಮಾರೇಶ್ವರ ಶಾಲೆಯ ಅನುಪಮಾ ಶ್ರೀಶೈಲ್ ಹಿರೆಹೋಳಿ, ವಿಜಯಪುರ ಜಿಲ್ಲೆಯ ನಾಗರಬೆಟ್ಟದ ಆಕ್ಸ್ಫರ್ಡ್ ಆಂಗ್ಲ ಶಾಲೆಯ ಬೀಮನಗೌಡ ಪಾಟೀಲ್ ಈ ನಾಲ್ವರು ಪ್ರಥಮ ಸ್ಥಾನ ಗಳಿಸಿದ್ದಾರೆ.
ಈ ಬಾರಿಯೂ ವಿದ್ಯಾರ್ಥಿನೀಯರು ಮೇಲುಗೈ ಸಾಧಿಸಿದ್ದು ಶೇ 87.87% ರಷ್ಟು ವಿದ್ಯಾರ್ಥಿನೀಯರು ಪಾಸ್ ಆಗಿದ್ದಾರೆ 80.08% ರಷ್ಟಿರುವ 341108 ಬಾಲಕರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
SLC ಪರೀಕ್ಷೆ ಫಲಿತಾಂಶದಲ್ಲಿ ಮಂಡ್ಯ 2ನೇ ಸ್ಥಾನ- ಶೇ.96.74,
ಹಾಸನ ಜಿಲ್ಲೆಗೆ 3ನೇ ಸ್ಥಾನ- ಶೇ.96.68
ಮೈಸೂರು ಜಿಲ್ಲೆಗೆ 16ನೇ ಸ್ಥಾನ- ಶೇ.89.75ರಷ್ಟು ಫಲಿತಾಂಶ
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 4ನೇ ಸ್ಥಾನ- ಶೇ.96.78
ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ- ಶೇ.75.49ರಷ್ಟು ಫಲಿತಾಂಶ ಬಂದಿದೆ.
Key words: SSLC-Result: toppers – state..