ಮೈಸೂರು ಸೆಂಟ್ ಫಿಲೋಮಿನಾ ಚರ್ಚ್ ನಲ್ಲಿ ಜ್ಯೂಬಿಲಿ 2025 ಕಾರ್ಯಕ್ರಮ ಆಯೋಜನೆ

 

ಮೈಸೂರು,ಡಿಸೆಂಬರ್,26,2024 (www.justkannada.in): ಮೈಸೂರಿನ ಸೆಂಟ್ ಫಿಲೋಮಿನಾ ಚರ್ಚ್ ನಲ್ಲಿ ಪ್ರತಿ ಇಪ್ಪತ್ತೈದು ವರ್ಷಗಳಿಗೊಮ್ಮೆ ನಡೆಯುವ ಜ್ಯೂಬಿಲಿ ಕಾರ್ಯಕ್ರಮ  ಈ ಬಾರಿ ಆಯೋಜನೆ ಮಾಡಲಾಗಿದೆ.

ಮೈಸೂರಿನಲ್ಲಿ ಕ್ರೈಸ್ತ ಧರ್ಮೀಯರಿಂದ ಜ್ಯೂಬಿಲಿ 2025 ಆಯೋಜಿಸಲಾಗಿದ್ದು, ಈ ಕುರಿತು ಧರ್ಮಾಧಿಕಾರಿಗಳು ಸುದ್ದಿಗೋಷ್ಠಿ ಮೂಲಕ ಕಾರ್ಯಕ್ರಮ ಮಾಹಿತಿ ನೀಡಿದರು.

ಜ್ಯೂಬಿಲಿ 2025 ಕಾರ್ಯಕ್ರಮಕ್ಕೆ ಮೈಸೂರು, ಚಾಮರಾಜನಗರ, ಕೊಡಗು ಮತ್ತು ಮಂಡ್ಯ ನಾಲ್ಕು  ಜಿಲ್ಲೆಗಳ ಸುಮಾರು 5 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಲಿದ್ದಾರೆ. ಡಿಸೆಂಬರ್ 29 ರಂದು ಸಂಜೆ  ಸುಮಾರು 8 ಅಡಿ ಎತ್ತರದ ಶಿಲುಬೆಯನ್ನ  ಬನ್ನಿ ಮಂಟಪ ಬಳಿಯಿಮದ ಸೆಂಟ್ ಫಿಲೋಮಿನಾ ಚರ್ಚ್ ವರಗೆ ಮೆರವಣಿಗೆ ಮೂಲಕ ತರಲಾಗುತ್ತದೆ.  ಅಂದೇ ಸೆಂಟ್ ಫಿಲೋಮಿನಾ ಮಹಾ ದೇವಾಲಯದಲ್ಲಿ ವಿಶೇಷ ಧರ್ಮಸಭೆಯನ್ನ ಹಮ್ಮಿಕೊಳ್ಳಲಾಗಿದೆ. ಜ್ಯೂಬಿಲಿ ಸಮಯದಲ್ಲಿ ವಿಶೇಷ ಪ್ರಾರ್ಥನೆ, ಬಲಿ ಪೂಜೆ ಸೇರಿದಂತೆ ಹಲವು ಧಾರ್ಮಿಕ ಪೂಜಾ ಕಾರ್ಯಗಳು ನೆರವೇರಲಿವೆ ಎಂದು ತಿಳಿಸಿದರು.

ಜಗತ್ತಿಗ ಒಳಿತು, ಶಾಂತಿಗಾಗಿ ಪೋಪ್ ಧರ್ಮಗುರುಗಳು ಜ್ಯೂಬಿಲಿಗೆ ಡಿ.24 ರಂದೇ  ಚಾಲನೆ ಕೊಟ್ಟಿದ್ದಾರೆ. ಪ್ರತಿ ಇಪ್ಪತ್ತೈದು ವರ್ಷಗಳಿಗೊಮ್ಮೆ  ಜ್ಯೂಬಿಲಿ ಕಾರ್ಯಕ್ರಮ ನಡೆಯುತ್ತದೆ. ಕಳೆದ 2000 ನೇ ಇಸವಿಯಲ್ಲಿ ಮೈಸೂರಿನ ಸೆಂಟ್ ಫಿಲೋಮಿನನಾ ಚರ್ಚ್ ನಲ್ಲಿ ಜ್ಯೂಬಿಲಿ ಜರುಗಿತ್ತು. ಜ್ಯೂಬಿಲಿ ಜಗತ್ತಿನಲ್ಲಿ ಶಾಂತಿ ತರಲು ಆಚರಿಸಲಾಗುತ್ತದೆ. ಮಹಾ ದೇವಾಲಯದಿಂದ  ಶಿಲುಬೆಯನ್ನ ನಾಲ್ಕು ಜಿಲ್ಲೆಗಳಿಗೂ ಕೂಡ ರಥಯಾತ್ರೆ ಮಾಡುವ ಮೂಲಕ ವರ್ಷ ಪೂರ್ತಿ ಜ್ಯುಬಿಲಿ ಆಚರಣೆ ಮಾಡಲಾಗುತ್ತದೆ ಎಂದು ಧರ್ಮಗುರುಗಳು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೈಸೂರು ಕ್ರೈಸ್ತ ಧರ್ಮ ಪ್ರಾಂತ್ಯಾಧಿಕಾರಿ ಬರ್ನಾಡ್ ಮೊರಾಸ್, ಕ್ರಿಸ್ಮಸ್ ಹಬ್ಬದ ಶುಭಾಶಯಗಳ ಕೋರಿದರು. ಇದು ಇಡೀ ಭೂ ಲೋಕಕ್ಕೆ ಸಂತಸವನ್ನು ತರುವ ಹಬ್ಬ. ನಿನ್ನೆ ಸಾವಿರಾರು ಜನ ಈ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಪ್ರಭು ಯೇಸು ಇಡೀ ಭೂಲೋಕವನ್ನೇ ಆಶೀರ್ವಾದಿಸುತ್ತಾರೆ ಎಂಬ ನಂಬಿಕೆ ಅವರಲ್ಲಿದೆ. ಎಲ್ಲಾ ಜಾತಿ, ಧರ್ಮದ ಜನರು ಪ್ರಭುವನ್ನ ಗೌರವಿಸಿದ್ದಾರೆ. ಜನರನ್ನ ಪಾಪದಿಂದ ಕ್ಷಮಿಸಿ ನಮ್ಮಲ್ಲರ ಸಂಬಂಧವನ್ನ ಬೆಳೆಸುವ ಉದ್ದೇಶ ಹೊಂದಿದ್ದಾನೆ. ಕ್ರಿಸ್ಮಸ್ ಹಬ್ಬ ಯಶಸ್ವಿಗೊಳಿಸಿದ ಸಾರ್ವಜನಿಕರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

Key words: Jubilee 2025,  St. Philomena’s Church, Mysore