ಹುಬ್ಬಳ್ಳಿ,ಫೆ,11,2021(www.justkannada.in): ಕುರುಬ ಸಮುದಾಯಕ್ಕೆ ಎಸ್.ಟಿ ಮೀಸಲಾತಿ ಹೋರಾಟದಲ್ಲಿ ರಾಜಕೀಯ ಮಾಡಲ್ಲ. ಆದರೆ ಆರ್ ಎಸ್ ಎಸ್ ನವರು ಕೆ.ಎಸ್ ಈಶ್ವರಪ್ಪ ಅವರನ್ನ ಎತ್ತಿಕಟ್ಟಿ ಹೋರಾಟ ಮಾಡಿಸುತ್ತಿದ್ದಾರೆ. ಎಸ್.ಟಿ ಮೀಸಲಾತಿ ಹೋರಾಟ ಆರ್.ಎಸ್ ಎಸ್ ಪ್ರೇರಿತ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಕುಲಶಾಸ್ತ್ರ ಅಧ್ಯಯನದ ವರದಿ ಬಂದಿಲ್ಲ. ವರದಿ ಬರುವ ಮುನ್ನವೇ ಹೋರಾಟ ಬೇಡ ಎಂದಿದ್ದೆ. ಆದರೆ ಈಗ ಹೋರಾಟ ಮಾಡುತ್ತಿರುವುದು ಆರ್. ಎಸ್ ಎಸ್ ಪ್ರೇರಿತ. ಈಶ್ವರಪ್ಪರನ್ನ ಆರ್.ಎಸ್ ಎಸ್ ಎತ್ತಿಕಟ್ಟುತ್ತಿದ್ದಾರೆ ಎಂದು ಟೀಕಿಸಿದರು.
ಸಚಿವ ಈಶ್ವರಪ್ಪರ ಸರ್ಟಿಫಿಕೇಟ್ ಬೇಕಿಲ್ಲ.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಏನು ಕೆಲಸ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದ ಸಚಿವ ಕೆ.ಎಸ್ ಈಶ್ವರಪ್ಪಗೆ ಟಾಂಗ್ ನೀಡಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ನಾನು ಏನು ಮಾಡಿದ್ದೇನೆ ಎಂಬುದು ಜನರಿಗೆ ಗೊತ್ತಿದೆ. ಹೀಗಾಗಿ ಸಚಿವ ಈಶ್ವರಪ್ಪ ಅವರ ಸರ್ಟಿಫಿಕೆಟ್ ಬೇಕಿಲ್ಲ. ಈಶ್ವರಪ್ಪ ಯಾರ್ರಿ?, ಈಶ್ವರಪ್ಪಗೆ ಲೆಕ್ಕ ಒಪ್ಪಿಸಬೇಕಾ? ಈ ಡೋಂಟ್ ಕೇರ್ ಈಶ್ವರಪ್ಪ ಎಂದು ಉತ್ತರಿಸಿದರು.
ENGLISH SUMMARY…
Fight for ST reservation is RSS motivated: ‘I don’t care Eshwarappa, says former CM Siddu’
Hubballi, Feb. 11, 2021 (www.justkannada.in): “I won’t do politics in the struggle to get ST reservation for Kuruba community. But the RSS people have instigated Eshwarappa for this demand. The struggle for ST reservation is motivated by RSS,” opined former Chief Minister Siddaramaiah.
Speaking in Hubballi today former CM Siddaramaiah said, “the genealogy study report has still not been completed. I had told let us wait for the report. But the present fight is RSS motivated. Eshwarappa has been instigated by the RSS people,” he alleged.
Keywords: Former CM Siddaramaiah/ Eshwarappa/ Demand for ST reservation for Kuruba community
Key words: ST- reserve- fight –inspired -RSS-Former CM- Siddaramaiah- minister-KS Eshwarappa.