ಹಾವೇರಿ,ಆಗಸ್ಟ್,22,2023(www.justkannada.in): ಎಸ್ ಟಿ ಸೋಮಶೇಖರ್ ಕಾಂಗ್ರೆಸ್ ಗೆ ಹೋದ್ರೂ ಮಂತ್ರಿಸ್ಥಾನ ಸಿಗಲ್ಲ. ಕ್ಷೇತ್ರದಲ್ಲಿ ಹೆಚ್ಚಿನ ಅನುದಾನ ಸಿಗಬಹುದು ಅಷ್ಟೆ ಎಂದು ಮಾಜಿ ಸಚಿವ ಬಿ.ಸಿ ಪಾಟೀಲ್ ಹೇಳಿದರು.
ಎಸ್ ಟಿ ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆ ವಿಚಾರ ಕುರಿತು ಮಾತನಾಡಿದ ಬಿ.ಸಿ ಪಾಟೀಲ್, ಪಕ್ಷ ಬಿಟ್ಟವರನ್ನ ಸೇರಿಸಿಕೊಳ್ಳಲ್ಲ ಎಂದು ಸಿದ್ಧರಾಮಯ್ಯ ಹೇಳಿದ್ರು. ಆದರೆ ಈಗ 136 ಶಾಸಕರಿದ್ದರೂ ಶಾಸಕರನ್ನ ಸೇರಿಕೊಳ್ಳುವ ಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಮೂರು ಗುಂಪುಗಳಿವೆ ಪರಮೇಶ್ವರ್, ಸಿದ್ಧರಾಮಯ್ಯ, ಡಿಕೆ ಶಿವಕುಮಾರ್ ಗುಂಪುಗಳಿವೆ. ಗಮನ ಬೇರೆಡೆ ಸೇಳೆಯಲು ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಪುತ್ರ ಕಾಂತೇಶ್ ಗೆ ಕೆ.ಎಸ್ ಈಶ್ವರಪ್ಪ ಹಾವೇರಿ ಕ್ಷೇತ್ರ ಟಿಕೆಟ್ ಕೇಳಿದ ವಿಚಾರಕ್ಕೆ ಸಂಬಂಧಿಸಿದಂತೆ ಅಸಮಾಧಾನ ಹೊರಹಾಕಿದ ಬಿ.ಸಿ.ಪಾಟೀಲ್, ಕೆ.ಎಸ್ ಈಶ್ವರಪ್ಪ ನನ್ನ ಮನಸ್ಸು ನೋಯಿಸಿದ್ದಾರೆ. ಈಶ್ವರಪ್ಪ ಇಲ್ಲಿಯೂ ಪುತ್ರನನ್ನು ಬಿಟ್ಟು ವಾತಾವರಣ ಕೆಡಿಸುತ್ತಿದ್ದಾರೆ. ಈ ಹಿಂದೆ ಕೆ.ಎಸ್ .ಈಶ್ವರಪ್ಪ ವಲಸಿಗ ಶಾಸಕರ ಬಗ್ಗೆ ಮಾತನಾಡಿದ್ದಾರೆ. ಮತ್ತೆ ಕಾಲ್ ಮಾಡಿದಾಗ ನಾನು ಹೇಳಿಲ್ಲ, ಕ್ಷಮಿಸಿ ಎಂದು ಹೇಳ್ತಾರೆ. ಸರ್ವೆ ನೋಡಿ ಹಾವೇರಿ ಕ್ಷೇತ್ರದ ಲೋಕಸಭಾ ಅಭ್ಯರ್ಥಿ ಬಗ್ಗೆ ನಿರ್ಧಾರ ಮಾಡಲಾಗುತ್ತೆ. ಏನೂ ಇಲ್ಲದೆ ಸುಮ್ಮನೆ ಇಲ್ಲಿಗೆ ಬಂದು ವಾತಾವರಣ ಕೆಡಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
Key words: ST Somashekhar -won’t – minister -Congress – former minister -BC Patil.