ಬೆಂಗಳೂರು,ಜನವರಿ,2,2020(www.justkannada.in): ಕೋವಿಡ್ -19 ಸೋಂಕಿಗೆ ಲಸಿಕೆ ನೀಡುವ ಪ್ರಾಯೋಗಿಕ ಕಾರ್ಯಕ್ರಮ – ಕೊರೋನಾ ಡ್ರೈ ರನ್ ಇಂದಿನಿಂದ ದೇಶಾದ್ಯಂತ ಆರಂಭವಾಗಿದ್ದು, ರಾಜ್ಯದಲ್ಲಿ ಇಂದು 5 ಜಿಲ್ಲೆಗಳಲ್ಲಿ ಕೋವಿಡ್-19 ಲಸಿಕೆ ಅಣಕು ಕಾರ್ಯಾಚರಣೆ ನಡೆಯುತ್ತಿದೆ.
ರಾಜ್ಯದ ಮೈಸೂರು, ಬೆಂಗಳೂರು,ಕಲ್ಬುರ್ಗಿ, ಶಿವಮೊಗ್ಗ, ಬೆಳಗಾವಿ ಈ 5 ಜಿಲ್ಲೆಗಳ 15 ಕೇಂದ್ರಗಳಲ್ಲಿ ಕೋವಿಡ್ ವ್ಯಾಕ್ಸಿನ್ ಡ್ರೈ ರನ್ ಕಾರ್ಯಾಚರಣೆ ನಡೆಯುತ್ತಿದೆ. ಈಗಾಗಲೇ ಹಲವು ಕಡೆಗಳಲ್ಲಿ ಕೊರೋನಾ ವ್ಯಾಕ್ಸಿನ್ ಡ್ರೈರನ್ ಆರಂಭವಾಗಿದೆ.
ಬೆಳಗಾವಿಯ ವಂಟಮೂರಿಯ ಪ್ರಾಥಮಿಕ ಆರೋಗ್ಯ ಕೇಂದ್ರ, ಶಿವಮೊಗ್ಗ ನಗರದ ಮೆಡಿಕಲ್ ಕಾಲೇಜು, ಕಲ್ಬುರ್ಗಿಯ ಅಶೋಕನಗರ ಆರೋಗ್ಯಕೇಂದ್ರದಲ್ಲಿ ಡ್ರೈ ರನ್ ಆರಂಭವಾಗಿದೆ. ಬೆಂಗಳೂರಿನ ಕಾಮಾಕ್ಷಿಪಾಳ್ಯದ ಬಿಬಿಎಂಪಿ ಆರೋಗ್ಯ ಕೇಂದ್ರದಲ್ಲಿ ಕೋವಿಡ್-19 ಲಸಿಕೆ ಅಣಕು ಕಾರ್ಯಾಚರಣೆಗೆ ಬಿಬಿಎಂಪಿ ವಿಶೇಷ ಆಯುಕ್ತ ರಾಜೇಂದ್ರ ಜೋಳನ್ ಚಾಲನೆ ನೀಡಿದರು.
ಇನ್ನು ಮೈಸೂರು ಜಿಲ್ಲೆಯ ಜಯನಗರ ಆಸ್ಪತ್ರೆ, ಹುಣಸೂರು ತಾಲ್ಲೂಕು ಬಿಳಿಕೆರೆ ಆರೋಗ್ಯ ಕೇಂದ್ರ, ಕೆ.ಆರ್ ನಗರ ತಾಲ್ಲೂಕು ಆಸ್ಪತ್ರೆಯನ್ನ ಕೊರೋನಾ ವ್ಯಾಕ್ಸಿನ್ ಡ್ರೈನ್ ರನ್ ಕಾರ್ಯಚರಣೆಗೆ ಆಯ್ಕೆ ಮಾಡಲಾಗಿದೆ.
Key words: Start -Corona Vaccine -Dry Run – state.
ENGLISH SUMMARY
Dry run for Corona vaccination begins in study
Bengaluru, Jan. 02, 2021 (www.justkannada.in): The dry run for the vaccination drive against the COVID-19 pandemic began across the country from today. The mock round of COVID-19 vaccination was conducted in 5 districts in the state.
The dry run (mock vaccination drive) was held in 15 centers in Mysuru, Bengaluru, Kalaburagi, Shivamogga, Belagavi Districts. The centers where this mock drive was held include the Primary Health Centre in Vantamoori in Belagavi, Medical College in Shivamogga, and Health Centre in Ashokanagara in Kalaburagi. BBMP Special Commissioner Rajendra Cholan launched the COVID-19 dry run at the BBMP health center in Kamakshipalya, in Bengaluru.
The Jayanagara Hospital in Mysuru district, Bilikere Health Centre in Hunasuru, Taluk Hospital in K.R. Nagara have been selected to conduct the dry run.
Keywords: COVID-10 vaccination/ dry run/ mock vaccination drive