ಬೆಂಗಳೂರು,ಜನವರಿ,8,2022(www.justkannada.in): ಕಾಂಗ್ರೆಸ್ ಸರ್ಕಾರವಿದ್ಧಾಗ ಮೇಕೆದಾಟು ಯೋಜನೆ ಯಾಕೆ ಜಾರಿ ಮಾಡಿಲ್ಲ ಎಂದು ಪ್ರಶ್ನಿಸಿರುವ ಬಿಜೆಪಿ ನಾಯಕರಿಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ತಿರುಗೇಟು ನೀಡಿದ್ದಾರೆ.
ಮೇಕೆದಾಟು ವಿಚಾರದಲ್ಲಿ ವಿಳಂಬ ಧೋರಣೆ ಮಾಡುತ್ತಿರುವುದು ಬಿಜೆಪಿ. ಕ್ಲಿಯರೆನ್ಸ್ ತೆಗೆದುಕೊಳ್ಳಲು ಎರಡು ವರ್ಷ ಬೇಕಾ ಮೇಕೆದಾಟು ಯೋಜನೆ ಆರಂಭಕ್ಕೆ ಎರಡುವರೆ ವರ್ಷ ಬೇಕೆ..? ಕೇಂದ್ರದಲ್ಲಿ ಬಿಜೆಪಿ ಇದ್ರೂ ವಿಳಂಬ ಏಕೆ ಎಂದು ಪ್ರಶ್ನಿಸಿದರು.
ಕಾರಜೋಳ ರಾಜಕಾರಣಕ್ಕಾಗಿ ಹೇಳಿಕೆ ನೀಡುತ್ತಿದ್ದಾರೆ ಅವರ ಹೇಳಿಕೆಯನ್ನ ಬಿಟ್ಟುಬಿಡಿ ರಾಜ್ಯ ಸರ್ಕಾರ ಎರಡುವರೆ ವರ್ಷದಿಂದ ಏನು ಮಾಢುತ್ತಿದೆ. ಪ್ರಯತ್ನ ಮಾಡುತ್ತಿದೆ ಎಂದು ಹೇಳುವುದೇ ಉತ್ತರವಾ..? ನಾಳೆಯಿಂದ ನಾವು ಪಾದಯಾತ್ರೆ ಮಾಡುತ್ತೇವೆ ಇವರು ಏನು ಮಾಡುತ್ತಾರೆ ನೋಡೋಣಾ. ನಮ್ಮನ್ನ ಪ್ರಶ್ನಿಸಲು ಇವರು ಅಧಿಕಾರಕ್ಕೆ ಬಂದಿದ್ದೀರಾ..?
ನಾವು ಕೊರೋನಾ ನಿಯಮ ಪಾಲಿಸಿಯೇ ಪಾದಯಾತ್ರೆ ಮಾಢುತ್ತೇವೆ. ಅರೆಸ್ಟ್ ಮಾಡೋರು ಮಾಡಲಿ ಉದ್ಧೇಶಪೂರ್ವಕಾವಿಯೇ 144 ಸೆಕ್ಷನ್ ಜಾರಿ ಮಾಡಿದ್ದಾರೆ. 15 ಜನ ಪಾದಯಾತ್ರೆ ಮಾಡಿದರೇ ಬಿಡ್ತೀವಿ ಅಂತಾರೆ. ಆಗಾದ್ರೆ ಅದು ನಿಷೇಧಾಜ್ಞೆ ಉಲ್ಲಂಘನೆ ಅಲ್ವಾ..? ಎಲ್ಲೂ ಇಲ್ಲದ ನಿಷೇಧಾಜ್ಞೆ ರಾಮನಗರದಲ್ಲಿ ಏಕೆ..? ಎಂದು ಸಿದ್ಧರಾಮಯ್ಯ ಕಿಡಿಕಾರಿದರು.
Key words: start –mekedatu project-Siddaramaiah – against -government.