ನವದೆಹಲಿ, ಸೆಪ್ಟೆಂಬರ್ 01, 2020 (www.justkannada): ಕೋವಿಡ್ 19 ಮುಂಜಾಗ್ರತಾ ಕ್ರಮದೊಂದಿಗೆ ಇಂದು ಜೆಇಇ ಮೇನ್ ಪರೀಕ್ಷೆ ಆರಂಭಗೊಂಡಿದೆ.
ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಎರಡು ಬಾರಿ ಜೆಇಇ ಮೇನ್ ಪರೀಕ್ಷೆ ಮುಂದೂಡಲ್ಪಟ್ಟಿತ್ತು. ಬಿಜೆಪಿಯೇತರ ರಾಜ್ಯಗಳ ವಿರೋಧದ ನಡುವೆಯೇ ಈ ಪರೀಕ್ಷೆಗಳು ನಿಗದಿಯಂತೆ ನಡೆಯುತ್ತಿದೆ.
8.58 ಲಕ್ಷ ವಿದ್ಯಾರ್ಥಿಗಳು ಜೆಇಇ ಮೇನ್, 15.97 ಲಕ್ಷ ವಿದ್ಯಾರ್ಥಿಗಳು ಸೆಪ್ಟೆಂಬರ್ 13ರಂದು ನೀಟ್ ಪರೀಕ್ಷೆಯಲ್ಲಿ ಭಾಗಿಯಾಗಲಿದ್ದಾರೆ. ಮುನ್ನೆಚ್ಚರಿಕಾ ಅಂಗವಾಗಿ ಪರೀಕ್ಷಾ ಕೇಂದ್ರ ಸಂಖ್ಯೆಯನ್ನು ಕೂಡಾ 570ರಿಂದ 660ಕ್ಕೆ ಏರಿಸಲಾಗಿದೆ.