ಬೆಂಗಳೂರು,ಮಾ,2,2020(www.justkannada.in): ಮಾರ್ಚ್ 5ರಂದು ಸಿಎಂ ಬಿಎಸ್ ಯಡಿಯೂರಪ್ಪ ರಾಜ್ಯ ಬಜೆಟ್ ಮಂಡನೆ ಮಾಡಲಿದ್ದು ಈ ಹಿನ್ನೆಲೆ ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ.
ಈ ಬಾರಿ ಕೃಷಿಗೆ ಪ್ರತ್ಯೇಕ ಬಜೆಟ್ ಮಂಡಿಸಲು ಬಿಎಸ್ ವೈ ಸಿದ್ಧತೆ ನಡೆಸಿದ್ದು, ಕೃಷಿ ಬಜೆಟ್ ಮಂಡನೆ ಬಳಿಕ ಸಾಮಾನ್ಯ ಬಜೆಟ್ ಮಂಡನೆ ಮಾಡಲಿದ್ದಾರೆ ಎನ್ನಲಾಗಿದೆ. ಇನ್ನು ಚಾಮುಂಡಿ ಬೆಟ್ಟಕ್ಕೆ ಚಿನ್ನದ ರಥ ಮಾಡಿಸಿಕೊಡುವಂತೆ ಭಕ್ತರರು ಬೇಡಿಕೆ ಇಟ್ಟಿರುವ ಹಿನ್ನೆಲೆ. ಈ ಬಾರಿಯ ಬಜೆಟ್‍ನಲ್ಲಿ ನಿರ್ಧಾರವಾಗುವ ವಿಶ್ವಾಸ ಇದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ಚಿನ್ನದ ರಥ ನಿರ್ಮಾಣ ಮಾಡುವುದಕ್ಕೆ ಬಜೆಟ್‍ನಲ್ಲಿ ಅನುದಾನ ಕೊಡಿಸುವ ಭರವಸೆ ನೀಡಿದ್ದಾರೆ . ಹೀಗಾಗಿ ಭಕ್ತರ ಬೇಡಿಕೆಗೆ ಸರ್ಕಾರ ಸ್ಪಂದಿಸುತ್ತಾ ಎಂಬುದನ್ನ ಕಾದು ನೋಡಬೇಕಿದೆ.
ಬಜೆಟ್ ಅಧಿವೇಶನದಲ್ಲಿ ದೊರೆಸ್ವಾಮಿ ವಿಚಾರ, ಪೌರತ್ವ ಕಾಯ್ದೆ, ಸಾಲಮನ್ನಾ, ಪಾಕ್ ಪರ ಘೋಷಣೆ ವಿಷಯಗಳ ಕುರಿತು ಕೋಲಾಹಲ ನಡೆಯುವ ಸಾಧ್ಯತೆ ಇದ್ದು ಈ ವಿಚಾರಗಳನ್ನ ಇಟ್ಟುಕೊಂಡು ಸದನದಲ್ಲಿ ಬಿಜೆಪಿ ವಿರುದ್ಧ ದಾಳಿ ನಡೆಸಲು ಪ್ರತಿಪಕ್ಷಗಳು ಸಿದ್ದತೆ ನಡೆಸುತ್ತಿವೆ. ಇನ್ನೊಂದೆಡೆ ಪ್ರತಿಪಕ್ಷಗಳಿಗೆ ಪ್ರತ್ಯುತ್ತರ ನೀಡಲು ಬಿಜೆಪಿ ಕೂಡಾ ಸಜ್ಜಾಗಿದೆ.
Key words: State Budget – March 5-start – budget session – today.