ಕಲಬುರಗಿ,ನವೆಂಬರ್,9,2021(www.justkannada.in): ಇದೇ ನವೆಂಬರ್ 27 ರಂದು ಕಲಬುರಗಿಯಲ್ಲಿ ನಡೆಯಲಿರುವ 36ನೆಯ ಪತ್ರಕರ್ತರ ರಾಜ್ಯ ಸಮ್ಮೇಳನದ ಲಾಂಛನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಬಿಡುಗಡೆಗೊಳಿಸಿದರು.
ಸಮ್ಮೇಳನದ ದಿನಾಂಕ ನಿಗದಿಗೊಳಿಸಿ ಲಾಂಛನ ಬಿಡುಗಡೆಗೊಳಿಸಿದ ಅವರು, ಸಮ್ಮೇಳನದ ಯಶಸ್ವಿ ಗೆ ಸರ್ಕಾರದ ಸರ್ವ ನಿಟ್ಟಿನ ಬೆಂಬಲವಿದೆ ಎಂದರು.
ತೊಗರಿ ಕಣಜ ಕಲಬುರಗಿಯಲ್ಲಿ ಸಮ್ಮೇಳನ ನಡೆಯುತ್ತಿರುವುದು ಖುಷಿ ವಿಷಯ. ಸಮ್ಮೇಳನದ ಉದ್ಘಾಟನೆ ಸಂದರ್ಭದಲ್ಲೇ ಕಲಬುರಗಿ ಪತ್ರಿಕಾ ಭವನದ ಮೊದಲ ಮಹಡಿ ಸಹ ಉದ್ಘಾಟನೆ ಸಹ ನೆರವೇರಿಸಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಕಲಬುರಗಿಯಲ್ಲಿ ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದನ್ನು ನೆನಪಿಸಿಕೊಂಡ ಸಿಎಂ ಬಸವರಾಜ ಬೊಮ್ಮಾಯಿ ಅವರು, ಕಲಬುರಗಿ ಪತ್ರಕರ್ತರು ಬಹಳ ಹೃದಯವಂತರು. ಜಿಲ್ಲೆಯ ಪತ್ರಕರ್ತರು ಅಂದಿನಿಂದ ಇಂದಿನವರೆಗೂ ತಮ್ಮೊಂದಿಗೆ ಹಾಗೆಯೇ ಇದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಕಲಬುರಗಿ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರು ಮಾತನಾಡಿ, 25 ವರ್ಷಗಳ ನಂತರ ಕಲಬುರಗಿಯಲ್ಲಿ ಸಮ್ಮೇಳನ ನಡೆಯುತ್ತಿದೆ. ಹೀಗಾಗಿ ಸಮ್ಮೇಳನ ಮಾದರಿಯಂತೆ ನಡೆಸಲಾಗುವುದು ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಸಮ್ಮೇಳನದ ಉದ್ಘಾಟನೆ ನೆರವೇರಿಸಿ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಕೋರಿದರು.
ಕೆಕೆಆರ್ ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ, ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಬಂಗ್ಲೆ, ಪತ್ರಕರ್ತರ ಸಂಘದ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಭವಾನಿಸಿಂಗ್ ಠಾಕೂರ್, ಪ್ರಧಾನ ಕಾರ್ಯದರ್ಶಿ ದೇವಿಂದ್ರಪ್ಪ ಆವಂಟಿ, ನಿಕಟಪೂರ್ವ ಅಧ್ಯಕ್ಷ ಬಾಬುರಾವ ಯಡ್ರಾಮಿ, ರಾಜ್ಯ ಸಮಿತಿ ಸದಸ್ಯರಾದ ಹಣಮಂತರಾವ ಭೈರಾಮಡಗಿ, ದೇವಿಂದ್ರಪ್ಪ ಕಪನೂರ, ಖಜಾಂಚಿ ರಾಜು ದೇಶಮುಖ, ಸೇರಿದಂತೆ ಮುಂತಾದವರಿದ್ದರು.
Key words: State Conference – Journalists-CM- Basavaraja Bommai- released-logo
ENGLISH SUMMARY…
State-level Journalists’ Conference: CM Basavaraj Bommai releases logo
Kalaburagi, November 9, 2021 (www.justkannada.in): Chief Minister Basavaraj Bommai today released the 36th Journalists State-level Conference logo at his official residence ‘Krishna’. The conference will be held on November 27 at Kalaburagi.
Announcing the date of the conference and releasing the logo, the Chief Minister said that the State Government will extend all support.
“It is indeed very happy to note that the conference is being held at Kalaburagi this year. The inauguration of the first floor of the Press Club building at Kalaburagi will also be done on the same day,” he informed.
KKR DB Chairman Dattatreya Patil Revoora, Journalists Association State Secretary Mallikarjuna Bangle, Journalists Association Kalaburagi District unit President Bhavanisingh Thakur, General Secretary Deveendrappa Avanti, Immediate former President Baburao Yadrami, State Committee member Hanamantharao Byramadagi, Deveendrappa Kapanura, Treasurer Raju Deshmukh, and others were present.
Keywords: State-level Journalists Conference/ Kalaburagi/ Chief Minister/ Logo release