ಬೆಂಗಳೂರು,ಮಾರ್ಚ್,25,2021(www.justkannada.in) : ಕಳ್ಳನ ಮನಸು ಹುಳ್ಹುಳ್ಳಗೆ ಎನ್ನುವಂತೆ ತಾವು ಮಾಡಿದ ಅನಾಚಾರ ಹೊರಬರದಂತೆ ತಡೆಯಾಜ್ಞೆ ತಂದಿದ್ದಲ್ಲದೆ ಇತರರ ಮೇಲೂ ವ್ಯಭಿಚಾರದ ಆರೋಪ ಹೊರಿಸಿದ್ದು, ಸ್ವತಃ ಬಿಜೆಪಿ ಪಕ್ಷದ ಕೆಲವು ಶಾಸಕರಿಗೆ ಮುಜುಗರವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಟೀಕಿಸಿದೆ.
ಸಚಿವ ಡಾ.ಕೆ.ಸುಧಾಕರ್ ಮಾತು ಬರೀ ಅವರ ವ್ಯಕ್ತಿತ್ವವನ್ನಷ್ಟೇ ಅಲ್ಲ ಇಡೀ ಬಿಜೆಪಿಯ ವಿಕೃತ ಮನಸ್ಥಿತಿಯನ್ನು ಅನಾವರಣಗೊಳಿಸಿದೆ. ಸಚಿವ ಬಿ.ಸಿ.ಪಾಟೀಲ್ ಹೇಳಿದಂತೆ ಹುಚ್ಚರ ಕತೆಯಲ್ಲ, ಬಿಜೆಪಿ ಸರ್ಕಾರವೇ ಹುಚ್ಚರ ಸಂತೆಯಂತಾಗಿದೆ ಎಂದು ಕಿಡಿಕಾರಿದೆ.
ವಮಾಮಾರ್ಗದ ಕೆಲಸಗಳಿಗೆ ಅಧಿಕಾರ ಬಳಕೆ
ಶಾಸಕರು, ಸಚಿವರಿಗೆ ಸಮನ್ವಯತೆ ಇಲ್ಲ, ನಾಲಿಗೆಗಳಿಗೆ ಎಲುಬಿಲ್ಲ, ಮಾತುಗಳಿಗೆ ಅರ್ಥವಿಲ್ಲ, ಜನಪರ ಯೋಜನೆ, ಯೋಚನೆಗಳಂತೂ ಇಲ್ಲವೇ ಇಲ್ಲ. ವಾಮಮಾರ್ಗದಲ್ಲಿ ಹಿಡಿದ ಅಧಿಕಾರವನ್ನು ವಾಮಮಾರ್ಗದ ಕೆಲಸಗಳಿಗೆ ಬಳಸಿಕೊಳ್ಳುತ್ತಿದೆ ಎಂದು ಆಕ್ರೋಶವ್ಯಕ್ತಪಡಿಸಲಾಗಿದೆ.
key words : State-Congress-tweet-against-BJP