ಬೆಂಗಳೂರು,ಅಕ್ಟೋಬರ್,9,2023(www.justkannada.in): ರಾಜ್ಯ ಕಾಂಗ್ರೆಸ್ ಸರ್ಕಾರ ರೈತರಿಗೆ ಆತ್ಮಹತ್ಯೆ ಗ್ಯಾರಂಟಿ ಕೊಟ್ಟಿದೆ. ಸರ್ಕಾರದ 6ನೇ ಗ್ಯಾರಂಟಿ ಆತ್ಮಹತ್ಯೆಯಾಗಿದೆ ಎಂದು ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಕಿಡಿಕಾರಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ.ಜಿ.ಟಿ ದೇವೇಗೌಡ, ರಾಜ್ಯದ 195 ತಾಲ್ಲೂಕುಗಳನ್ನು ಸರ್ಕಾರ ಬರ ಪೀಡಿತ ಎಂದು ಘೋಷಣೆ ಮಾಡಿದೆ. ಆದ್ರ ಸರ್ಕಾರ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಿಲ್ಲ. ಬೆಳೆಹಾನಿಗೆ ಒಂದೇ ಒಂದು ರೂಪಾಯಿ ಪರಿಹಾರ ಕೊಟ್ಟಿಲ್ಲ. ಈ ಮೂಲಕ ರೈತರಿಗೆ ಆತ್ಮಹತ್ಯೆ ಗ್ಯಾರಂಟಿ ಕೊಟ್ಟಿದೆ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರದ ಪ್ರಕಾರ ರಾಜ್ಯದಲ್ಲಿ 40 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಪಂಪ್ ಸೆಟ್ ಗಳಿಗೆ ಬೊಮ್ಮಾಯಿ ಸರ್ಕಾರ 7ಗಂಟೆ ವಿದ್ಯುತ್ ಕೊಡುತ್ತಿತ್ತು. ನೀವು ಎಷ್ಟು ಗಂಟೆ ಕರೆಂಟ್ ಕೊಡ್ತಾ ಇದ್ದೀರಿ ಎಂದು ಶಾಸಕ ಜಿ.ಟಿ ದೇವೇಗೌಡ ಪ್ರಶ್ನಿಸಿದರು.
Key words: State government – given- suicide guarantee – farmers – MLA -GT Deve Gowda