ಬೆಂಗಳೂರು,ಸೆ,13,2019(www.justkannada.in): ಇತ್ತೀಚೆಗೆ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಂಧನದ ಬಳಿಕ ಬಿಜೆಪಿ ಒಕ್ಕಲಿಗರ ವಿರುದ್ಧ ಎನ್ನುವ ಟೀಕೆಗಳು ಸಾಕಷ್ಟು ಕೇಳಿ ಬರುತ್ತಿದೆ. ಅಲ್ಲದೇ ಒಕ್ಕಲಿಗ ಸಮುದಾಯ ತುಳಿಯಲು ಹುನ್ನಾರ ಎಂಬ ಆಪಾದನೆಗಳು ಕೇಳಿ ಬಂದಿವೆ. ಹೀಗಾಗಿ ಬಿಜೆಪಿ ಒಕ್ಕಲಿಗರ ವಿರುದ್ಧ ಎಂಬ ಹಣೆಪಟ್ಟಿಯಿಂದ ತಪ್ಪಿಸಿಕೊಳ್ಳಲು ರಾಜ್ಯ ಸರ್ಕಾರ ಪ್ಲಾನ್ ಮಾಡಿದೆ.
ಹೌದು, ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆ ನಿರ್ಮಿಸಲು ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಸಂಕಲ್ಪ ಮಾಡಿದೆ. ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ನೆನಪು ಚಿರಸ್ಥಾಯಿಯಾಗಿಸಲು ನಮ್ಮ ಸರ್ಕಾರದಿಂದ 100 ಕೋಟಿ ಬಿಡುಗಡೆಗೆ ನಿರ್ಧಾರ ಮಾಡಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಟ್ವಿಟ್ ಮಾಡಿದ್ದಾರೆ.
ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನದಿಂದಾಗಿ ರಾಜ್ಯದಲ್ಲಿ ಡಿಕೆಶಿವಕುಮಾರ್ ಪರವಾಗಿ ಒಕ್ಕಲಿಗ ಸಮುದಾಯ ನಿಂತಿದ್ದು, ಹೀಗಾಗಿ ಪಾರ್ಟಿ ಡ್ಯಾಮೇಜ್ ಕಂಟ್ರೋಲ್ ಮಾಡಲು ಕೆಂಪೇಗೌಡರ ಪ್ರತಿಮೆ ನಿರ್ಮಿಸಲು ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದೆ.
Key words: state government – planning – escape – labeled -BJP’ anti-party -sentiment