ಬೆಂಗಳೂರು,ಜೂ,23,2020(www.justkannada.in): ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಮಧ್ಯೆ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆಗೆ ದರ ನಿಗದಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗೆ ಎರಡು ರೀತಿ ದರ ನಗದಿ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಜನರಲ್ ವಾರ್ಡ್ ಗೆ 5200 ರೂ. ದರ ನಿಗದಿ ಮಾಡಿದ್ದು, ವೆಂಟಿಲೇಟರ್ ರಹಿತ ಐಸೋಲೇಷನ್ ವಾರ್ಡ್ ಐಸಿಯುಗೆ 8500 ರೂ. ದರ ವೆಂಟಿಲೇಟರ್ ಸಹಿತ ಐಸೋಲೇಷನ್ ಐಸಿಯುಗೆ 10 ಸಾವಿರ ರೂಪಾಯಿ ಹಾಗೂ ಹೆಚ್ ಡಿಯು (ಹೈಡಿಪೆಂಡೆನ್ಸಿ ಯುನಿಟ್)ಗೆ 7 ಸಾವಿರ.ರೂ ನಿಗದಿ ಮಾಡಲಾಗಿದೆ.
ಇನ್ನು ನೇರವಾಗಿ ಖಾಸಗಿ ಆಸ್ಪತ್ರೆಗೆ ತೆರಳಿದರೆ ಅದಕ್ಕೆ ಬೇರೆ ರೀತಿ ದರ ನಿಗದಿ ಮಾಡಲಾಗಿದೆ. ಜನರಲ್ ವಾರ್ಡ್ ಗೆ 10 ಸಾವಿರ ರೂ ವೆಂಟಿಲೇಟರ್ ರಹಿತ ಐಸೋಲೇಷನ್ ಐಸಿಯುಗೆ 15 ಸಾವಿರ ರೂ. ಹಾಗೂ ವೆಂಟಿಲೇಟರ್ ಸಹಿತ ಐಸೋಲೇಷನ್ ಐಸಿಯುಗೆ 25 ಸಾವಿರ ರೂ. ಹೆಚ್ ಡಿಯುಗೆ 12 ಸಾವಿರ ರೂ. ದರವನ್ನು ನಿಗದಿ ಮಾಡಲಾಗಿದೆ. ಇದೇ ವೇಳೆ, ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಹಾಸಿಗೆಗಳನ್ನು ಕೊರೊನಾ ಸೋಂಕಿತರಿಗೆ ಮೀಸಲಿಡುವಂತೆ ಸೂಚನೆ ನೀಡಲಾಗಿದೆ.
Key words: state government – rate –fix-corona -treatment -private hospitals.