ಬೆಂಗಳೂರು, ಜುಲೈ 19, 2022 (www.justkannada.in): ಕೇಂದ್ರ ಸರ್ಕಾರ ಜಿಎಸ್ ಟಿಯನ್ನು ಶೇ.5ರಷ್ಟು ಹೇರಿಕೆ ಮಾಡಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮೊಸರು, ಲಸ್ಸಿ, ಮಜ್ಜಿಗೆಯ ದರಗಳನ್ನು ಹೆಚ್ಚಿಸಿದಂತಹ ರಾಜ್ಯ ಸರ್ಕಾರದ ವಿರುದ್ಧ ರಾಜ್ಯದಾದ್ಯಂತ ತೀವ್ರ ಖಂಡನೆ ಎದುರಾದ ಹಿನ್ನೆಲೆಯಲ್ಲಿ ಸರ್ಕಾರಗಳನ್ನು ದರಗಳನ್ನು ಕೊಂಚ ಇಳಿಸಿದೆ.
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಸೋಮವಾರದಂದು ರೂ.1 ರಿಂದ ರೂ.3ವರೆಗೆ ಹೆಚ್ಚಿಸಿದ್ದಂತಹ ಈ ಪದಾರ್ಥಗಳ ಬೆಲೆಗಳನ್ನು ೫೦ ಪೈಸೆಯಿಂದ ರೂ.೨ರವರೆಗೆ ಕಡಿಮೆಗೊಳಿಸಿದೆ.
ಒಂದು ಕಿಲೊ ‘ನಂದಿನಿ’ ಮೊಸರಿನ ಪ್ಯಾಕೆಟ್ ಬೆಲೆ ಒಂದು ರೂಪಾಯಿ ಕಡಿಮೆ, ಅಂದರೆ ರೂ.೪೫ ಆಗಿದೆ. ೫೦೦ ಗ್ರಾಂ ಹಾಗೂ ೨೦೦ ಗ್ರಾಂ ಪ್ಯಾಕೆಟ್ ಗಳ ಬೆಲೆ ಕ್ರಮವಾಗಿ ರೂ.೨೩ ಹಾಗೂ ರೂ.೧೦.೫೦ ಆಗಿದ್ದು, ಕ್ರಮವಾಗಿ ರೂ.೧ ಹಾಗೂ ರೂ.೧.೫೦ಯಷ್ಟು ಕಡಿಮೆಯಾಗಿದೆ. ಪ್ಯಾಕೆಟ್ ಗಳು, ಟೆಟ್ರಾ ಪ್ಯಾಕ್ ಹಾಗೂ ಪಿಇಟಿ ಬಾಟಲ್ ಗಳಲ್ಲಿ ಮಾರಾಟ ಮಾಡುವ ಮಜ್ಜಿಗೆಯ ಬೆಲೆ ಕ್ರಮವಾಗಿ ರೂ.೭.೫೦, ರೂ.೧೦.೫೦ ಹಾಗೂ ರೂ.೧೨.೫೦ ಆಗಲಿದ್ದು, ನಿನ್ನೆಯ ಬೆಲೆಯೇರಿಕೆಯ ಹೋಲಿಕೆಯಲ್ಲಿ ೫೦ ಪೈಸೆ ಇಳಿಕೆ ಕಂಡಿದೆ.
ಆದರೆ ಲಸ್ಸಿ ಪ್ಯಾಕೆಟ್ ಗಳ ಪರಿಷ್ಕೃತ ಬೆಲೆಗಳಲ್ಲಿ ಅಂತಹ ಮಹತ್ತರವಾದ ವ್ಯತ್ಯಾಸವೇನೂ ಮಾಡಲಾಗಿಲ್ಲ. ಸಿಹಿ ಲಸ್ಸಿ ಹಾಗೂ ಮ್ಯಾಂಗೊ ಲಸ್ಸಿ ಟೆಟ್ರಾ ಪ್ಯಾಕೆಟ್ ಗಳ ದರವನ್ನು ೫೦ ಪೈಸೆ ಇಳಿಸಲಾಗಿದೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: State -Govt – prices –curd- lassi-buttermilk -50 paise to Rs 2