ಮೈಸೂರು,ಏಪ್ರಿಲ್,18,2021(www.justkannada.in) : ಕೊರೊನಾ ನಿಯಂತ್ರಣಕ್ಕೆ ಟೊಂಕಕಟ್ಟಿ ನಿಂತ ಮೈಸೂರು ಜಿಲ್ಲಾಡಳಿತವು ರಾಜ್ಯದಲ್ಲಿ ಯೇ ಕೋವಿಡ್ ಲಸಿಕೆ ನೀಡುವಲ್ಲಿ ಮೈಸೂರು ಮುಂದಿದೆ.
ಮೈಸೂರು ಜಿಲ್ಲಾಡಳಿತ ನಿರೀಕ್ಷೆಗೂ ಮೀರಿ ಲಸಿಕೆ ನೀಡುವಲ್ಲಿ ಗುರಿ ಸಾಧಿಸುತ್ತಿದೆ. ನೆನ್ನೆ ಒಂದೇ ದಿನ 30,525 ಮಂದಿಗೆ ಲಸಿಕೆ ನೀಡಿದ್ದು, ಶೇಕಡಾ 122ರಷ್ಟು ಲಸಿಕೆ ನೀಡುವ ಮೂಲಕ ನಿಗದಿತ ಗುರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಗುರಿ ಸಾಧಿಸಿದೆ.
ಪ್ರತಿದಿನ 25,050 ಲಸಿಕೆ ನೀಡುವ ಗುರಿ ಹೊಂದಿದ್ದು, ಉಳಿದೆಲ್ಲಾ ಜಿಲ್ಲೆಗಳಿಗಿಂತಲೂ ಮುಂದಿದೆ.
key words : state-itself-Covid Vaccine-giving-Mysore-First