ಎಚ್.ವಿಶ್ವನಾಥ ಶಕ್ತಿ ಪ್ರದರ್ಶನಕ್ಕೆ ಕುರುಬ ಸಮಾಜದ ರಾಜ್ಯಮಟ್ಟದ ಸಮಾವೇಶ ಸಾಧ್ಯತೆ ?

ಮೈಸೂರು,ಸೆಪ್ಟೆಂಬರ್,20,2020(www.justkannada.in) : ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಸಚಿವ ಸಂಪುಟ ವಿಸ್ತರಣೆ ಹೇಳಿಕೆ ಹಿನ್ನೆಲೆಯಲ್ಲಿ ಕುರುಬ ಸಮಾಜದ ರಾಜ್ಯಮಟ್ಟದ ಸಮಾವೇಶವನ್ನು ಅಕ್ಟೋಂಬರ್ ಮೊದಲ ವಾರದಲ್ಲಿ ನಡೆಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಲಿದ್ದಾರೆ ಎಂದು ತಿಳಿದು ಬಂದಿದೆ.

jk-logo-justkannada-logo

ಬಿಜೆಪಿ ಹಿರಿಯ ನಾಯಕರು ಹಾಗೂ ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್ ವಿಶ್ವನಾಥ ಅವರು ಇತ್ತೀಚಿನ ದೆಹಲಿ ಭೇಟಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಂಪುಟ ವಿಸ್ತರಣೆ ಹೇಳಿಕೆ ಹಿನ್ನೆಲೆಯಲ್ಲಿ ಕುರುಬ ಸಮಾಜದ ರಾಜ್ಯ ಮಟ್ಟದ ಸಮಾವೇಶವನ್ನು ನಡೆಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.

State-level-shepherd-society-H.Vishwanath-Shakti-show-Possibility-convention?

ಇಂದು 5 ಗಂಟೆಗೆ ಕುರುಬ ಸಮಾಜದ ಮುಖಂಡರ ಸಭೆ

ಈ ಸಮಾವೇಶದ ರೂಪುರೇಷೆ ಹೇಗಿರಬೇಕು ಎಂದು ಚರ್ಚಿಸಲು ಇಂದು ಸಂಜೆ ಐದು ಗಂಟೆಗೆ ಶಾಸಕರ ಭವನದ ಸಮ್ಮೇಳನ ಸಭಾಂಗಣದಲ್ಲಿ ಕುರುಬ ಸಮಾಜದ ಮುಖಂಡರ ಸಭೆ ಕರೆಯಲಾಗಿದೆ.
ರಾಜ್ಯದಲ್ಲಿ ಈ ಹಿಂದೆ ಇದ್ದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯ ಎದ್ದಿದ ಶಾಸಕರ ನಾಯಕತ್ವ ವಹಿಸಿಕೊಂಡು ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರಲು ಪ್ರಮುಖ ಪಾತ್ರವನ್ನು ವಿಶ್ವನಾಥ ವಹಿಸಿದ್ದರು. ಮುಖ್ಯಮಂತ್ರಿ ಯಾಗುವ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಮಂತ್ರಿ ಮಾಡುವ ಭರವಸೆಯನ್ನು ವಿಶ್ವನಾಥ ಅವರಿಗೆ ನೀಡಿದ್ದರು. ಅದರೆ, ಯಡಿಯೂರಪ್ಪ ಅವರು ಕೊಟ್ಟ ಮಾತನ್ನು ಇಲ್ಲಿಯವರೆಗೆ ಈಡೇರಿಸಲ್ಲಿಲ್ಲ ಎನ್ನುವುದು ವಿಶ್ವನಾಥ ಅವರ ಅಸಂಖ್ಯಾತ ಅಭಿಮಾನಿಗಳ ಅಸಮಾಧಾನ. ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಇಂದಿನ ಸಭೆಯು ಕಾರಣವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

key words : State-level-shepherd-society-H.Vishwanath-Shakti-show-Possibility-convention?

English summary

SHOW OF STRENGTH BY H VISHWANATH?

Mysore,september,20,2020 : In the back of his Delhi visit and CM BS Yediyurappa’s announcement of cabinet expansion, BJP MLC & senior leader H Vishwanath is all set to show his strength by organising a rally during first week of October.

As a prelude to the rally, Vishwanath is said to be holding a meeting Kubura leaders this evening at Legislators’ Home. Community leaders cutting across party lines are expected to attend the meeting.

Supporters of Vishwanath claim that was instrumental in bringing BJP and Yediyurappa back in power by providing leadership to the rebel MLAs who defected from Congress and JDS. This apart, Yediyurappa had assured the Kuruba leader a place in the cabinet.