ಮೈಸೂರು, ಆಗಸ್ಟ್, 27, 2020(www.justkannada.in) ; ಕೊರೊನಾ ಭೀತಿ ಹಿನ್ನೆಲೆ ಪುಸ್ತಕ ಕೊಳ್ಳುವಲ್ಲಿ ವಿದ್ಯಾರ್ಥಿಗಳು, ಪೋಷಕರು ಹಿಂದೇಟು ಹಾಕುತ್ತಿದ್ದು ಹೀಗಾಗಿ ಪುಸ್ತಕ ವ್ಯಾಪಾರಿಗಳ ಸ್ಥಿತಿ ಅತಂತ್ರವಾಗಿದೆ.
ಪುಸ್ತಕ ವ್ಯಾಪಾರದಲ್ಲಿ ಪ್ರತಿವರ್ಷವು ಉತ್ತಮ ವ್ಯಾಪಾರವಾಗುತ್ತಿತ್ತು. ಆದರೆ, ಕೊರೊನಾದಿಂದಾಗಿ ಸುಮಾರು 6 ತಿಂಗಳಿಂದ ಪುಸ್ತಕ ವ್ಯಾಪಾರಿಗಳ ಸ್ಥಿತಿ ಅತಂತ್ರವಾಗಿದ್ದು, ಕೊಳ್ಳುವವರಿಲ್ಲದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಹ ಪರಿಸ್ಥಿತಿ ಎದುರಾಗಿದೆ.
ಪುಸ್ತಕ ಮಾರಾಟವನ್ನು ನಂಬಿ ಬದುಕು ಸಾಗಿಸುತ್ತಿದ್ದವರಿಗೆ ಕೊರೊನಾ ಬಾರಿ ಪೆಟ್ಟು ನೀಡಿದೆ. ಕೊರೊನಾ ದಿಂದಾಗಿ ಆನ್ ಲೈನ್ ಶಿಕ್ಷಣದತ್ತ ವಿದ್ಯಾರ್ಥಿಗಳು ಹೆಚ್ಚು ಒಲವು ತೋರಿಸಿದ ಪರಿಣಾಮ ಪುಸ್ತಕ ವ್ಯಾಪಾರಿಗಳ ಸ್ಥಿತಿ ಮತ್ತಷ್ಟು ಹೀನಾಯ ಸ್ಥಿತಿಗೆ ತಲುಪಿದಂತ್ತಾಗಿದೆ.
Key words ; status-those-believe-book-trade?