ವೈದ್ಯಕೀಯ ವಿದ್ಯಾರ್ಥಿಗಳ ಸ್ಟೇ ಫಂಡ್ ಹೆಚ್ಚಳ : ಮುಷ್ಕರ ಕೈ ಬಿಟ್ಟ ವಿದ್ಯಾರ್ಥಿಗಳು

ಬೆಂಗಳೂರು,ಆಗಸ್ಟ್,23,2024 (www.justkannada.in): ಸ್ನಾತಕೋತ್ತರ ವೈದ್ಯಕೀಯ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮತ್ತು  ಸೀನಿಯರ್ ರೆಸಿಡೆಂಟ್ ವೈದ್ಯರುಗಳ ಶಿಷ್ಯವೇತನ (ಸ್ಟಿಪೆಂಡ್)ವನ್ನು ಶೇ.25ರಷ್ಟು ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ.

ಸ್ಟೈಫಂಡ್ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಮುಷ್ಕರಕ್ಕೆ ಕರೆನೀಡಿದ್ದರು. ಪರಿಷ್ಕೃತ ವೇತನವ ಆಗಸ್ಟ್ 1ರಿಂದಲೇ ಜಾರಿಗೆ ಬಂದಿದ್ದು, ಶೇ.25ರಷ್ಟು ಹೆಚ್ಚಳವಾಗಲಿದೆ. ಸರ್ಕಾರ ಶಿಷ್ಯವೇತನ ಹೆಚ್ಚಳ ಮಾಡಿದ ಬೆನ್ನಲ್ಲೇ  ವೈದ್ಯರು ಮುಷ್ಕರನ್ನು ಹಿಂಪಡೆದಿದ್ದಾರೆ.

ಪರಿಷ್ಕೃತ  ವೇತನ:

ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು:

ಕೋರ್ಸ್‍ಗಳು – ಮಾಸಿಕ ವೇತನ

1ನೇ ವರ್ಷ – ರೂ. 45,000 ದಿಂದ 56,250

2ನೇ ವರ್ಷ- ರೂ. 50,000 ದಿಂದ 62,500

3ನೇ ವರ್ಷ- ರೂ. 55,000 ದಿಂದ 68,750

 

ಸೂಪರ್ ಸ್ಪೆಷಾಲಿಟಿ ವೈದ್ಯ ವಿದ್ಯಾರ್ಥಿಗಳು:

ಕೋರ್ಸ್‍ಗಳು – ಮಾಸಿಕ ವೇತನ

1ನೇ ವರ್ಷ – ರೂ. 55,000 ದಿಂದ 68,750

2ನೇ ವರ್ಷ- ರೂ. 60,000 ದಿಂದ 75,000

3ನೇ ವರ್ಷ- ರೂ. 65,000 ದಿಂದ 81,250

 

ಸೀನಿಯರ್ ರೆಸಿಡೆಂಟ್ಸ್  – ರೂ. 60,000 ದಿಂದ 75,000

ಮಂಜೂರಾದ ಸೀಟುಗಳು

ಸ್ನಾತಕೋತ್ತರ 3,540

ಸೂಪರ್ ಸ್ಪೆಷಾಲಿಟಿ 445

ಸೀನಿಯರ್ ರೆಸಿಡೆಂಟ್ 527

ಒಟ್ಟು 4,312  ಸೀಟುಗಳು

Key words: Stay fund, increase, medical students