“ಇನ್ನೂ 20 ವರ್ಷಕ್ಕೆ ಗಾಂಧೀಜಿ ಹೆಸರು ಹೇಳಿದರೆ ಶಿಕ್ಷೆಯಾಗುತ್ತೆ ಎಂಬ ವಾತಾವರಣ” : ಸಂಸ್ಕೃತಿ ಚಿಂತಕ ಡಾ.ಜಿ.ರಾಮಕೃಷ್ಣ ಆತಂಕ

ಮೈಸೂರು,ಜನವರಿ,30,2021(www.justkananda.in) : ಇನ್ನೂ ಇಪ್ಪತ್ತು ವರ್ಷಕ್ಕೆ ಗಾಂಧೀಜಿ ಹೆಸರು ಹೇಳಿದರೆ ನಿನಗೆ ಶಿಕ್ಷೆಯಾಗುತ್ತೆ ಎಂದು ಹೇಳುವ ಸಂದರ್ಭ, ವಾತಾವರಣವಿದೆ ಎಂಬುದನ್ನು ಗಮನಕ್ಕೆ ತೆಗೆದುಕೊಳ್ಳದಿದ್ದರೆ ಅರಣ್ಯರೋಧನವಾಗುತ್ತದೆ ಎಂದು ಹಿರಿಯ ಸಂಸ್ಕೃತಿ ಚಿಂತಕ ಡಾ.ಜಿ.ರಾಮಕೃಷ್ಣ ಆತಂಕವ್ಯಕ್ತಪಡಿಸಿದರು.jk

ಮೈಸೂರು ವಿಶ್ವವಿದ್ಯಾನಿಲಯ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ ಗಾಂಧಿ ಭವನ ಸಭಾಂಗಣದಲ್ಲಿ ಆಯೋಜಿಸಿದ್ದ “73ನೇ ಸರ್ವೋದಯ ದಿನಾಚರಣೆ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗಾಂಧೀಜಿಯವರನ್ನು ಸೈದ್ದಾಂತಿಕವಾಗಿ ಕೊಲ್ಲಲಾಗುತ್ತಿದೆ. ಆ ರೀತಿಯ ಮನಸ್ಸುಗಳು ನಮ್ಮ ಸುತ್ತಲಿವೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಅಂಥಹವರೊಂದಿಗೆ ಜಟಾಪಟಿ ನಡೆಯಬೇಕಿದೆ ಎಂದರು.

ಸಾಮುದಾಯಿಕವಾಗಿ ಮಾತನಾಡುವುದಕ್ಕೆ ಅಂಜುವ ಸನ್ನಿವೇಶ

ಅಕ್ಟೋಂಬರ್ 2, ಜನವರಿ 30ರಂದು ಅಷ್ಟೇ ಗಾಂಧೀಜಿಯವರ ಸ್ಮರಿಸಲಾಗುತ್ತಿದೆ. ಆ ಎರಡು ದಿನಗಳಂದು ಗಾಂಧೀಜಿಯವರ ಕಟ್ಟ ದ್ವೇಷಿಗಳು ಅವರನ್ನು ಹೊಗಳುತ್ತಾರೆ. ಪ್ರಸ್ತುತ ಸಾಮುದಾಯಿಕವಾಗಿ ಮಾತನಾಡುವುದಕ್ಕೆ ಅಂಜುವ ಸನ್ನಿವೇಶದಲ್ಲಿದ್ದೇವೆ. ಹಂಪ ನಾಗರಾಜಯ್ಯ ಅವರಿಗಾದ ಅನುಭವ ನಮ್ಮ ಎದುರಿಗಿದೆ ಎಂದು ವಿಷಾದವ್ಯಕ್ತಪಡಿಸಿದರು.

ದೇಶದಲ್ಲಿ ಸಮುದಾಯದ ಆಕಾಂಕ್ಷೆಯ ಮಾನ್ಯತೆಗಿಂತಲೂ ಯಾರೋ ಒಬ್ಬ ವ್ಯಕ್ತಿಯ ದುರಾಲೋಚನೆಗೆ ಪ್ರತಿಕ್ರಿಯೆ ದೊರೆಯುತ್ತದೆ. ಕಟ್ಟಕಡೆಯ ವ್ಯಕ್ತಿಗೂ ಮಾನ್ಯತೆ ದೊರಕಿದೆಯೆ?, ಅವರ ಅಭಿವೃದ್ಧಿಗೆ ಬೇಕಾದ ವಾತಾವರಣ ನಿರ್ಮಾಣವಾಗಿದೆಯೇ? ಎಂಬಿತ್ಯಾದಿ ಪ್ರಶ್ನೆಗಳು ನಮ್ಮ ಎದುರಿವೆ ಎಂದರು. Still 20 years-Gandhiji-Name-told-punished-Atmosphere-Culture-thinker-Dr.G.Ramakrishna-Anxiety

ಗಾಂಧೀಜಿಯವರು ಕೊಲೆಯಾದ ದಿನವನ್ನ ಸರ್ವೋದಯ ದಿನವಾಗಿ ಆಚರಿಸುವುದು ವಿಪರ್ಯಾಸ. ಎಲ್ಲರ ಉದ್ದಾರಕ್ಕಾಗಿ ನೀನು ತೊಲಗು ಎನ್ನುವ ರೀತಿಯಲ್ಲಿದೆ. ಗಾಂಧೀಜಿಯವರ ಸರ್ವೋದಯ ತತ್ವದ ಅಳವಡಿಕೆ, ಅಭಿವೃದ್ಧಿಯ ಬಗ್ಗೆ ಪ್ರಶ್ನಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಅಸಹನೆ, ಅಸಮಾನತೆ, ಅತಿಸಂಗ್ರಹ ಮಾರಕವಾಗಿದೆ.  ಇವುಗಳನ್ನು ಇಲ್ಲವಾಗಿಸಲು ನಾವು ಯಾವ ಮಾರ್ಗಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ಚಿಂತಿಸಬೇಕು. ಅವಕಾಶ ಮತ್ತು ಸೌಲಭ್ಯದಲ್ಲಿ ಸಮಾನತೆ ಇಲ್ಲದಿರುವ ಸಂದರ್ಭದಲ್ಲಿ ಸಮಾನ ಸ್ಪರ್ಧೆಯನ್ನು ಒಪ್ಪಿಕೊಂಡಾಗ ಎಲ್ಲರೂ ಒಂದೇ ರೀತಿಯಲ್ಲಿ ಏಳಿಗೆ ಕಾಣಬೇಕು ಎಂದರೇ ಅದು ಸಾಧ್ಯವೇ ? ಎಂದು ಕಿಡಕಾರಿದರು.

ಅತಿ ಸಂಗ್ರಹ ಎನ್ನುವುದು ಮೌಲ್ಯಗಳು ಕಸದ ಬುಟ್ಟಿಗೆ Still 20 years-Gandhiji-Name-told-punished-Atmosphere-Culture-thinker-Dr.G.Ramakrishna-Anxiety

ಅತಿ ಸಂಗ್ರಹ ಎನ್ನುವುದು ಮೌಲ್ಯವನ್ನು ಕಸದ ಬುಟ್ಟಿಗೆ ಹಾಕಿದೆ. ಎಲ್ಲಿಂದ ಬಂತು, ಯಾರ ದುಡಿಮೆಯಿಂದ ಬಂತು ಎಂದು ಪ್ರಶ್ನೆ ಹಾಕಬಾರದು ಎಂಬುದು ವ್ಯಾಪಕವಾಗಿ ಬೇರೂರಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೀತಿಗಳ ಅನುಷ್ಠಾನದ ಕೊರತೆಯಿದೆ

ನೀತಿಗಳನ್ನು ಬರೆಯುವವ ಪ್ರತಿಭಾವಂತರು ಇದ್ದಾರೆ. ಆದರೆ, ಅವುಗಳನ್ನು ಮರ್ಪಕವಾಗಿ ಅನುಷ್ಟಾನಕ್ಕೆ ತರಲು ಮಾತ್ರ ಆಗುತ್ತಿಲ್ಲ. ಸ್ವಾವಲಂಬನೆ ಎಂಬುದು ಗಾಂಧಿಯವರ ಮುಖ್ಯ ಗುರಿಯಾಗಿತ್ತು. ಹೀಗಾಗಿ, ದೇಶವನ್ನು ಹರಾಜಿಗೆ ಇಟ್ಟು ಸ್ವಾವಲಂಬನೆ ಗಳಿಸುತ್ತೇವೆ ಎನ್ನುವುದು ಮೂರ್ಖತನ ಎಂದು ಆಕ್ರೋಶವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆ ನಿವೃತ್ತ ನಿರ್ಮಲೀಕರಣ ದಫೇದಾರ್ ಕಮಲಾ ಅವರನ್ನು ಸನ್ಮಾನಿಸಲಾಯಿತು. Still 20 years-Gandhiji-Name-told-punished-Atmosphere-Culture-thinker-Dr.G.Ramakrishna-Anxiety

ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಕುಲಸಚಿವ ಪ್ರೊ.ಆರ್.ಶಿವಪ್ಪ, ಕುಲಸಚಿವ(ಪರೀಕ್ಷಾಂಗ) ಪ್ರೊ.ಎ.ಪಿ.ಜ್ಞಾನ ಪ್ರಕಾಶ್, ಗಾಂಧಿ ಭವನ ನಿರ್ದೇಶಕ ಪ್ರೊ.ಎಂ.ಎಸ್.ಶೇಖರ್ ಇತರರು ಉಪಸ್ಥಿತರಿದ್ದರು.

ENGLISH SUMMARY…

In 20 years we may have to go to jail if we tell the name of Gandhiji in this country: Dr. G. Ramakrishna
Mysuru, Jan. 30, 2021 (www.justkannada.in): “Within the next 20 years, in our country we may be jailed if we tell the name of Mahatma Gandhiji. If we don’t realize this and act we might have to repent in the future,” lamented Dr. G. Ramakrishna Cultural thinker.
He participated in a program held at the Gandhi Bhavan in Mysuru, on the occasion of the 73rd Sarvodaya DaAy today.
In his address he said, “Today Gandhiji is being theoretically killed. We can see people with such a mindset. We have to fight with such people,” he said.Still 20 years-Gandhiji-Name-told-punished-Atmosphere-Culture-thinker-Dr.G.Ramakrishna-Anxiety
“We will remember Gandhiji only on October 2, and January 30. Even his haters will praise him on these two days. Today we are in such a situation where we are scared to speak about community. We have experienced what happened to Hampa Nagarajaiah,” he added.
“Intolerance and inequality are very dangerous. We have to find a path to remove this. Today, we are in a situation without equal opportunity and facilities, whereas we have agreed equal competition. In such a situation is it possible to think everyone should improve equally?,” he questioned.
Mysore City Corporation retired Sanitization Dafedar Kamala was felicitated on this occasion.
Keywords: 73rd Sarvodaya Divas/ University of Mysore/ Gandhi Bhavan

key words : Still 20 years-Gandhiji-Name-told-punished-Atmosphere-Culture-thinker-Dr.G.Ramakrishna-Anxiety