ರಾಜ್ಯದಲ್ಲಿ ಈಗಲೂ ವೈದ್ಯಕೀಯ ಆಮ್ಲಜನಕ ಪೂರೈಕೆಯಲ್ಲಿ ಕೊರತೆ: ವರದಿ

ಬೆಂಗಳೂರು, ಅಕ್ಟೋಬರ್ 29, 2022 (www.justkannada.in): ಕರ್ನಾಟಕದಲ್ಲಿ ಕೋವಿಡ್ ಎರಡನೇ ಅಲೆಯ ಸಮಯದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಅನೇಕರು ಪ್ರಾಣ ಕಳೆದುಕೊಳ್ಳುವಂತಾಯಿತು. ಆಗ ರಾಜ್ಯ ಸರ್ಕಾರ ಈ ಕೊರತೆಯನ್ನು ನೀಗಿಸಲು ಹಲವು ಕ್ರಮಗಳನ್ನು ಕೈಗೊಂಡಿತು.

ಆದರೆ ಆ ಕ್ರಮಗಳು ಆಮ್ಲಜನಕ ಸರಬರಾಜು ಕೊರತೆಯನ್ನು ಸಂಪೂರ್ಣವಾಗಿ ಪೂರೈಸಿಲ್ಲ. ಒಂದು ವೇಳೆ ಈ ಹಿಂದಿನಂತಹ ಪರಿಸ್ಥಿತಿ ಈಗ ಎದುರಾದರೆ ಕರ್ನಾಟಕ ಮತ್ತೊಮ್ಮೆ ಬಹಳ ತೊಂದರೆ ಎದುರಿಸಬೇಕಾಗುತ್ತದೆ, ಎಂದು ಒನ್ ಹೆಲ್ತ್ ಟ್ರಸ್ಟ್ ಎಂಬ ಹೆಸರಿನ ಲಾಭದ ಉದ್ದೇಶ ಇಲ್ಲದಿರುವಂತಹ ಸಂಸ್ಥೆಯೊಂದು ಅಕ್ಟೋಬರ್ 19ರ ವರದಿಯೊಂದು ತಿಳಿಸಿದೆ.

ಆ ವರದಿಯ ಪ್ರಕಾರ ಕರ್ನಾಟಕ, ಏರ್ ಸೆಪರೇಷನ್ ಯೂನಿಟ್‌ ಗಳ ಮೂಲಕ (ಎಎಸ್‌ಯುಗಳು) ದೇಶದಲ್ಲಿ ದೈನಂದಿನ ಆಮ್ಲಜನಕ ಉತ್ಪಾದನೆಯಲ್ಲಿ ಶೆ.೧೦-೧೫% ರಷ್ಟು (ಪ್ರತಿ ದಿನ ೧,೩೫೦ ಮೆಟ್ರಿಕ್ ಟನ್‌ಗಳು – ಎಂಟಿಪಿಡಿ) ಕೊಡುಗೆ ನೀಡುತ್ತದೆ. ಆದರೆ ಕೋವಿಡ್ ಸಮಯದಲ್ಲಿ ನಮ್ಮ ರಾಜ್ಯದಲ್ಲಿ ಶೇ.೪೧ರಷ್ಟು ವೈದ್ಯಕೀಯ ಆಮ್ಲಜನಕದ ಕೊರತೆ ಎದುರಾಯಿತು. ಎಎಸ್‌ ಯುಗಳು ಮೂಲಭೂತವಾಗಿ ಕೈಗಾರಿಕೆಗಳ ಅಗತ್ಯಗಳನ್ನು ಪೂರೈಸುತ್ತದೆ. ಇದೇ ಕೊರತೆಗೆ ಪ್ರಮುಖ ಕಾರಣ. ಜೊತೆಗೆ ಕರ್ನಾಟಕದಲ್ಲಿ ಆಮ್ಲಜನಕವನ್ನು ಶೇಖರಿಸಿ ಇಡುವ ವ್ಯವಸ್ಥೆ ಹಾಗೂ ಸಾರಿಗೆ ವ್ಯವಸ್ಥೆಗಳು ಸರಿಯಿಲ್ಲ.

ಕರ್ನಾಟಕದ ವೈದ್ಯಕೀಯ ಆಮ್ಲಜನಕದ ಅಗತ್ಯ ಮಾರ್ಚ್ ತಿಂಗಳಲ್ಲಿ ೧೪೦ ಎಂಟಿಪಿಡಿಗಳಷ್ಟಿತ್ತು ಎಂದು ವರದಿಗಳು ಅಂದಾಜಿಸಿವೆ. ಈ ಪೈಕಿ ಕೇವಲ ೧೧೦ ಎಂಟಿಪಿಡಿಗಳಷ್ಟು ಆಮ್ಲಜಕವನ್ನು ಮಾತ್ರ ಸರಬರಾಜು ಮಾಡಲಾಗಿದೆ. “ರಾಜ್ಯದಲ್ಲಿ ಆಸ್ಪತ್ರೆಗಳು ಹಾಗೂ ವ್ಯಕ್ತಿಗಳಿಂದ ವೈದ್ಯಕೀಯ ಆಮ್ಲಜನಕದ ಬೇಡಿಕೆ ಅಷ್ಟಾಗಿ ಇಲ್ಲದಿರುವ ಕಾರಣದಿಂದಾಗಿ ಪ್ರಸ್ತುತದ ಅಗತ್ಯವನ್ನು ಹೇಗೋ ಪೂರೈಸಲಾಗುತ್ತಿದೆ,” ಎನ್ನುತ್ತಾರೆ ಒನ್ ಹೆಲ್ತ್ ಟ್ರಸ್ಟ್ ನ ಅನುಷ್ಠಾನ ಪಾಲುದಾರರಾದ ಪ್ರಶಾಂತ್ ಅರುಕಿಯ.

ಒಂದು ವೇಳೆ ಕೋವಿಡ್ ಎರಡನೆ ಅಲೆಯಂತಹ ಪರಿಸ್ಥಿತಿ ಈಗ ಎದುರಾದರೆ, ಈಗ ಸರಬರಾಜು ಆಗುತ್ತಿರುವ ವೈದ್ಯಕೀಯ ಆಮ್ಲಜನಕ ಪ್ರಮಾಣದ (೧,೨೦೦ ಎಂಟಿಪಿಡಿ) ೧೦ರಷ್ಟು ಅಗತ್ಯ ಎದುರಾಗುತ್ತದೆ. ಒಂದು ವೇಳೆ ಕರ್ನಾಟಕದಲ್ಲಿ ಕೋವಿಡ್ ತಪಾಸಣಾ ಪ್ರಮಾಣ ಎರಡನೇ ಅಲೆಯಲ್ಲಿ ಕೇರಳದಂತಹ ಇತರೆ ರಾಜ್ಯಗಳಷ್ಟು ಹೆಚ್ಚಾಗಿದ್ದರೆ, ೧,೬೮೦ ಎಂಟಿಪಿಡಿಗಳಷ್ಟು ವೈದ್ಯಕೀಯ ಆಮ್ಲಜನಕದ ಅವಶ್ಯಕತೆ ಇರುತಿತ್ತು.

ಕೋವಿಡ್ ಸಾಂಕ್ರಾಮಿಕ ಬಂದಾಗಿನಿಂದ ರಾಜ್ಯ ಸರ್ಕಾರ ವೈದ್ಯಕೀಯ ಆಮ್ಲಜನಕದ ಉತ್ಪಾದನೆಗಾಗಿ ಹೊಸ ಪ್ರೆಷರ್ ಸ್ವಿಂಗ್  ಅಬ್ಸಾರ್ಪಷನ್ (ಪಿಎಸ್‌ಎ) ಘಟಕಗಳನ್ನು ತೆರೆಯುವ ಮೂಲಕ ಕೊರತೆಯನ್ನು ನೀಗಿಸಲು ಪ್ರಯತ್ನಿಸಿದೆ. ಜೊತೆಗೆ, ಆಸ್ಪತ್ರೆಗಳ ಮಟ್ಟದಲ್ಲೇ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ (ದ್ರವ ರೂಪದ ವೈದ್ಯಕೀಯ ಆಮ್ಲಜನಕ)ದ ಘಟಕಗಳನ್ನು ಅಳವಡಿಸುವ ಮೂಲಕವೂ ಪ್ರಯತ್ನಗಳನ್ನು ನಡೆಸಿದೆ. ಆದರೆ ಈ ಕ್ರಮಗಳು ಸೀಮಿತವಾಗಿವೆ ಎನ್ನುತ್ತದೆ ವರದಿ. ಪಿಎಸ್‌ ಎ ಘಟಕಗಳು, ದೊಡ್ಡ ಪ್ರಮಾಣದಲ್ಲಿ ವೈದ್ಯಕೀಯ ಆಮ್ಲಜನಕವನ್ನು ಉತ್ಪಾಸುವಂತಹ ಎಎಸ್‌ ಯು ಘಟಕಗಳಂತಲ್ಲದೆ ಕೇವಲ ಸ್ವಲ್ಪ ಪ್ರಮಾಣದ ಆಮ್ಲಜನಕವನ್ನು ಮಾತ್ರ ಉತ್ಪಾದಿಸುವ ಸಾಮರ್ಥ್ಯವುಳ್ಳ ಸ್ಥಳೀಯ ಘಟಕಗಳು ಎಂದಿದೆ.

ಒಂದು ಆಸ್ಪತ್ರೆಗೆ, ಪಿಎಸ್‌ಎ ಘಟಕವನ್ನು ನಿರ್ವಹಿಸಲು ಬಂಡವಾಳ, ನಿರ್ವಹಣೆ ಹಾಗೂ ವಿದ್ಯುತ್ ವೆಚ್ಚಗಳು ಹೆಚ್ಚಾಗಿರುತ್ತದೆ. ಜೊತೆಗೆ ಉತ್ಪಾದನೆಯಾಗುವ ಆಮ್ಲಜನಕದ ಗುಣಮಟ್ಟವು ಅಷ್ಟರಲ್ಲೇ ಇರುತ್ತದೆ. ಇದರಿಂದಾಗಿ ಕೋವಿಡ್ ನಂತರದಲ್ಲಿ ಹಲವು ನಗರಗಳ ಅನೇಕ ಆಸ್ಪತ್ರೆಗಳಲ್ಲಿ ಅಳವಡಿಸಿರುವಂತಹ ಪಿಎಸ್‌ಎ ಘಟಗಳು ನಿರುಪಯುಕ್ತವಾಗಿವೆ, ಎಂದು ವರದಿಯಲ್ಲಿ ತಿಳಿಸಲಾಗಿದೆ.

ಅಳವಡಿಸಿರುವ ಅನೇಕ ಘಟಕಗಳು, ಗುಣಮಟ್ಟದಂತಹ ಕೆಲವು ವಿಷಯಗಳು ತಪಾಸಣೆ ನಡೆಸದಿರುವ ಕಾರಣದಿಂದಾಗಿ ಇನ್ನೂ ಆರಂಭವೇ ಆಗಿಲ್ಲ. ಅನುಷ್ಠಾನಗೊಳಿಸಿರುವಂತಹ ಕೆಲವು ಘಟಕಗಳು ಅಷ್ಟಾಗಿ ಬಳಸದೇ ಭವಿಷ್ಯದಲ್ಲಿ ಎದುರಾಗಬಹುದಾದ ತುರ್ತು ಪರಿಸ್ಥಿತಿಗಳಿಗಾಗಿ ಹಾಗೇ ಉಳಿಸಿಕೊಳ್ಳಲಾಗಿದೆ. ಇದರಿಂದಾಗಿ ಆಸ್ಪತ್ರೆಗಳ ಖರ್ಚುಗಳೂ ಸಹ ಸೂಕ್ತವಾಗಿಲ್ಲ. ಹಾಗಾಗಿ, ಅನುಷ್ಠಾನ ಸಾಮರ್ಥ್ಯವಿದ್ದರೂ ಸಹ ಈ ಹೊಸ ಪಿಎಸ್‌ ಎ ಘಟಕಗಳ ಬಳಕೆ ಹಾಗೂ ಉಪಯೋಗದ ಕುರಿತು ಪ್ರಶ್ನೆಗಳು ಎದುರಾಗಿವೆ.

ಜಿಲ್ಲೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿರುವ ದ್ರವ ರೂಪದ ವೈದ್ಯಕೀಯ ಆಮ್ಲಜನಕ ಶೇಖರಣಾ ವ್ಯವಸ್ಥೆಗಳು ಭಾಗಗಳಾಗಿವೆ. ೧೩ ಜಿಲ್ಲಾ ಆಸ್ಪತ್ರೆಗಳಲ್ಲಿ ೬,೦೦೦ ಲೀಟರ್ ಟ್ಯಾಂಕ್‌ ಗಳನ್ನು ಅಳವಡಿಸಲಾಗಿದೆ, ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ೧,೦೦೦ ಲೀಟರ್‌ ಗಳ ಟ್ಯಾಂಕ್‌ ಗಳನ್ನು ಅಳವಡಿಸಲಾಗಿವೆ. ಆದರೆ ರಾಜ್ಯದ ಯಾವುದಾದರೂ ನಿಗಧಿತ ಭಾಗದಲ್ಲಿ ಬೇಡಿಕೆಯ ಪ್ರಮಾಣ ಏರಿಕೆಯಾದರೆ, ಈ ಘಟಕಗಳ ಮೂಲಕ ಆ ಪ್ರದೇಶಕ್ಕೆ ವೈದ್ಯಕೀಯ ಆಮ್ಲಜಕನವನ್ನು ಸರಬರಾಜು ಮಾಡುವ ಯಾವುದೇ ಸರಿಯಾದ ವ್ಯವಸ್ಥೆಯೂ ಇಲ್ಲ, ಸರಿದೂಗಿಸುವುದಕ್ಕೂ ಸಾಧ್ಯವಾಗುವುದಿಲ್ಲ.

ಈ ಹಿನ್ನೆಲೆಯಲ್ಲಿ ಒನ್ ಹೆಲ್ತ್ ಟ್ರಸ್ಟ್ ರಾಜ್ಯ ಸರ್ಕಾರದೊಂದಿಗೆ, ೨-೩ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಆಮ್ಲಜನಕದ ಸರಬರಾಜಿಗಾಗಿ ‘ಆಮ್ಲಜನಕ ಗ್ರಿಡ್’ ಅನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಮುಂದಿನ ಒಂದು ವಾರದಲ್ಲಿ ಈ ಜಿಲ್ಲೆಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದು ಅರುಕಿಯ ಮಾಹಿತಿ ನೀಡಿದ್ದಾರೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: still -shortage – medical- oxygen -supply – state-Report