ಕೆಆರ್ ಎಸ್ ಡ್ಯಾಂ ಮೆಟ್ಟಿಲಿನ ಗೋಡೆಯಿಂದ 30ಕ್ಕೂ ಹೆಚ್ಚು ಕಲ್ಲು ಕುಸಿತ: ಆತಂಕದ ವಾತಾವರಣ.

ಮಂಡ್ಯ,ಜುಲೈ,19,2021(www.justkannada.in): ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ ಎಸ್ ಡ್ಯಾಂ ಬಿರುಕು ವಿವಾದದ ಬೆನ್ನಲ್ಲೇ ಇದೀಗ ಕೆಆರ್ ಎಸ್  ಡ್ಯಾಂ ಮೆಟ್ಟಿಲಿನ ಗೋಡೆಯಿಂದ 30ಕ್ಕೂ ಹೆಚ್ಚು ಕಲ್ಲು ಕುಸಿದಿದ್ದು ಆತಂಕದ ವಾತಾವರಣ ಮನೆ ಮಾಡಿದೆ.jk

ಡ್ಯಾಂನಿಂದ ಬೃಂದಾವನ ಹಾಗೂ  ಕಾವೇರಿ ಮಾತೆ ಪ್ರತಿಮೆಗೆ ಹೋಗಲು ನಿರ್ಮಿಸಿದ್ದ +80 ಅಡಿ ಗೇಟುಗಳ ಬಳಿ ಇರುವ ಮೆಟ್ಟಿಲಿನ ಗೋಡೆಯಿಂದ ಕಲ್ಲು ಕುಸಿದಿದ್ದು, ಡ್ಯಾಂ ಬಿರುಕು ವಿವಾದದ ಬೆನ್ನಲ್ಲೇ  ಕಲ್ಲು ಕುಸಿತದಿಂದ ಆತಂಕ ಹೆಚ್ಚಾಗಿದೆ.

ಡ್ಯಾಂ ಭದ್ರತೆ ದೃಷ್ಟಿಯಿಂದ ಹಲವು ವರ್ಷದ ಹಿಂದೆಯೇ ಮೆಟ್ಟಿಲ ಮೇಲೆ  ಸಾರ್ವಜನಿಕರ ಸಂಚಾರ ನಿರ್ಬಂಧಿಸಲಾಗಿತ್ತು. ಇದೀಗ ಈ ಘಟನೆಯಿಂದಾಗಿ ಬೇಬಿ ಬೆಟ್ಟದ ಕಲ್ಲು ಗಣಿಗಾರಿಕೆಯಿಂದ ಡ್ಯಾಂಗೆ ಅಪಾಯಿದ ಭೀತಿ ಮತ್ತಷ್ಟು ಹೆಚ್ಚಳವಾಗಿದೆ.

ಮೆಟ್ಟಿಲುಗಳನ್ನು ಮಣ್ಣು, ಸುರ್ಕಿಯಿಂದ ನಿರ್ಮಾಣ ಮಾಡಿಲಾಗಿತ್ತು. ಸತತ ಮಳೆಯಿಂದಾಗಿ ಕಲ್ಲುಗಳು ಏಕಾಏಕಿ ಕುಸಿದಿದ್ದು, ಕಾವೇರಿ ನೀರಾವರಿ ನಿಗಮದ  SE ವಿಜಯ ಕುಮಾರ್ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗಿದೆ. ಇನ್ನು ಕಲ್ಲು ಕುಸಿದಿರುವ ಬಗ್ಗೆ ಆತಂಕ ಬೇಡ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ENGLISH SUMMARY…..

More than 30 stones adjacent to the steps in the KRS dam structure sink triggering panic
Mandya, July 19, 2021 (www.justkannada.in): More than 30 stones adjacent to the wall of the steps in the historic KRS dam have sunk triggering panic. The incident has taken place even as the row over the allegation of development of crack in the KRS dam structure is still fresh.
The stones of the wall adjacent to the steps near the 80+ feet gates that lead to the Brindavan gardens and Kaveri statue from the dam have sunk reportedly.
The movement of people in this area was prohibited keeping in mind the safety of the dam structure. This incident has increased the fear of probable danger due to the stone quarrying at the nearby ‘Baby Betta.’
These steps were constructed using sand and surki which have sunk due to incessant rains. However, inspection is going on under the supervision of the Superintendent Engineer of the Kaveri Neeravari Nigama. Officials have also clarified that there is no need to panic about the sinking of the stones.
Keywords: KRS Dam/ structure/ stones/ sink/ Mandya/ Baby Betta/ stone quarrying/ mining

Key words:  stone -collapses – wall – KRS- Dam