ಹಾವೇರಿ,ಮಾರ್ಚ್,14,2023(www.justkannada.in): ಹಾವೇರಿ ಜಿಲ್ಲೆ ರಟ್ಟಿಹಳ್ಳಿ ಗ್ರಾಮದಲ್ಲಿ ಮಸೀದಿ ವ್ಯಾನ್, ಆಟೋ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಮಾರ್ಚ್ 9 ರಂದು ಹಿಂದೂಪರ ಕಾರ್ಯಕರ್ತರು ನಡೆಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮೆರವಣಿಗೆಗೆ ಮಸ್ಲಿಂ ಸಮುದಾಯದ ಯುವಕರು ಅಡ್ಡಿಪಡಿಸಿದ್ದರು ಎನ್ನಲಾಗಿತ್ತು. ಸಂಗೊಳ್ಳಿ ರಾಯಣ್ಣ ಪ್ರತಿಮೆ ಮೆರವಣಿಗೆಗೆ ತಡೆಯೊಡ್ಡಿದ್ದನ್ನ ವಿರೋಧಿಸಿ ಇಂದು ಹಿಂದೂ ಕಾರ್ಯಕರ್ತರು ರ್ಯಾಲಿ ನಡೆಸಿದ್ದರು. ಈ ವೇಳೆ ಮಸೀದಿ, ಮನೆ ಮತ್ತು ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿದೆ ಎನ್ನಲಾಗಿದೆ.
ಮುಸ್ಲಿಮರ ಮನೆ, ವಾಹನಗಳ ಮೇಲೂ ಕಲ್ಲುತೂರಾಟ ಮಾಡಲಾಗಿದೆ. ಹಿಂದೂ ಕಾರ್ಯಕರ್ತರು ಕಾರು, ಓಮ್ನಿ ಕಾರಿನ ಗ್ಲಾಸ್ ಒಡೆದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಇದೀಗ ಮುಸ್ಲಿಮರು ವಾಸಿಸುವ ಪ್ರದೇಶಗಳು ಹಾಗೂ ಮಸೀದಿಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
Key words: Stone -pelting – mosques-Rattahalli-Haveri district