ಬೆಂಗಳೂರು, ಡಿಸೆಂಬರ್ 12, 2021 (www.justkannada.in): ಅಮೆರಿಕದ ಇತಿಹಾಸದಲ್ಲಿಯೇ ‘ಅತಿದೊಡ್ಡ ಚಂಡಮಾರುತ’ಕ್ಕೆ ಜನ ತತ್ತರಿಸಿ ಹೋಗಿದ್ದಾರೆ.
ಯುನೈಟೆಡ್ ಸ್ಟೇಟ್ಸ್‌ನ ಹಲವು ರಾಜ್ಯಗಳಲ್ಲಿ ಏಕಾಏಕಿ ಶುರುವಾದ ಬಿರುಗಾಳಿಯಿಂದಾಗಿ 80ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಮತ್ತು ಹತ್ತಾರು ಮಂದಿ ಕಣ್ಮರೆಯಾಗಿದ್ದಾರೆ.
ಅಮೆರಿಕದ ಇತಿಹಾಸದಲ್ಲಿಯೇ ‘ಅತಿದೊಡ್ಡ ಚಂಡಮಾರುತ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ.
ಎಷ್ಟು ಜೀವಗಳು ಸಾವಿಗೀಡಾಗಿವೆ ಮತ್ತು ಹಾನಿಯ ಪೂರ್ಣ ಪ್ರಮಾಣದ ಬಗ್ಗೆ ನಮಗೆ ಇನ್ನೂ ಮಾಹಿತಿ ಇಲ್ಲ ಎಂದು ಬಿಡಲ್ ಮಾಹಿತಿ ನೀಡಿದ್ದಾರೆ.
ಕೆಂಟುಕಿಯ ಇತಿಹಾಸದಲ್ಲಿಯೇ ಇದು ಅತ್ಯಂತ ಕೆಟ್ಟ, ವಿನಾಶಕಾರಿ, ಮಾರಣಾಂತಿಕ ಸುಂಟರಗಾಳಿಯಾಗಿದೆ. ಇದರಲ್ಲಿ ನಾವು 100ಕ್ಕೂ ಹೆಚ್ಚು ಜನರನ್ನು ಕಳೆದುಕೊಂಡಿರಬಹುದು’ ಎಂದು ರಾಜ್ಯದ ಗವರ್ನರ್ ಆಯಂಡಿ ಬೆಶಿಯರ್ ಆಂತಂಕ ವ್ಯಕ್ತಪಡಿಸಿದ್ದಾರೆ.