ಮೈಸೂರು,ಡಿಸೆಂಬರ್,21,2024 (www.justkannada.in): ಬೀದಿ ನಾಯಿಗಳ ದಾಳಿಯಿಂದಾಗಿ ಮಗುವಿಗೆ ಗಂಭೀರ ಗಾಯವಾಗಿರುವ ಘಟನೆ ಮೈಸೂರು ತಾಲ್ಲೂಕು ಜಯಪುರ ಗ್ರಾಮದಲ್ಲಿ ನಡೆದಿದೆ.
ಬರಡನಪುರ ಗ್ರಾಮದ ಗುರುಸ್ವಾಮಿ ಪುತ್ರಿ ತ್ರಿಷಿಕಾ ಬೀದಿನಾಯಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದಾಳೆ. ಬೀದಿನಾಯಿಗಳ ಹಿಂಡು ತ್ರಿಷಿಕಾ ಮೇಲೆ ದಾಳಿ ನಡೆಸಿದ್ದು ಕೈ ಸೇರಿ ದೇಹದ ವಿವಿಧ ಭಾಗಗಳಿಗೆ ಗಾಯಗೊಳಿಸಿವೆ.
ಈ ವೇಳೆ ಗ್ರಾಮಸ್ಥರು ಮಗುವಿನ ಕೂಗಾಟ ಕೇಳಿ ತಕ್ಷಣ ಅಲ್ಲಿಗೆ ಬಂದು ನಾಯಿಗಳನ್ನು ಓಡಿಸಿ ಮಗುವನ್ನ ರಕ್ಷಿಸಿದ್ದಾರೆ. ಗಂಭೀರ ಗಾಯಗೊಂಡ ತ್ರಿಷಿಕಾಳನ್ನ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಈ ಬಗ್ಗೆ ಗ್ರಾಮ ಪಂಚಾಯಿತಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಜಯಪುರ ಗ್ರಾಮಸ್ಥರ ಅಳಲು ತೋಡಿಕೊಂಡಿದ್ದಾರೆ.
Key words: Stray dog, attack, Child, injured