ಬೆಳಗಾವಿ,ಫೆಬ್ರವರಿ,6,2021(www.justkannada.in): ಅನಧಿಕೃತ ಪಡಿತರ ಚೀಟಿ ರದ್ಧತಿಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳುವ ಮೂಲಕ ಅನಧಿಕೃತ ಪಡಿತರ ಚೀಟಿ ಹೊಂದಿರುವವರಿಗೆ ಆಹಾರ ಸಚಿವ ಉಮೇಶ್ ಕತ್ತಿ ಶಾಕ್ ನೀಡಿದ್ದಾರೆ.
ಬೆಳಗಾವಿಯಲ್ಲಿ ಇಂದು ಮಾತನಾಡಿದ ಸಚಿವ ಉಮೇಶ್ ಕತ್ತಿ, ಅನಧಿಕೃತ ಪಡಿತರ ಚೀಟಿ ಸಂಬಂಧ ಸಮೀಕ್ಷೆ ಮಾಡಲಾಗುತ್ತದೆ. ಮಾರ್ಚ್ 31ರೊಳಗೆ ಕಾರ್ಡ್ ಗಳ ವರದಿ ಬರಲಿದೆ. ಈ ಬಳಿಕ ಅನಧಿಕೃತ ಪಡಿತರ ಚೀಟಿಗಳನ್ನ ರದ್ಧುಮಾಡುತ್ತೇವೆ ಎಂದು ತಿಳಿಸಿದರು.
ಇನ್ನು ಕಾಳಸಂತೆಯಲ್ಲಿ ಪಡಿತರ ಅಕ್ಕಿ ಮಾರಾಟ ಮಾಡದಂತೆ ಕ್ರಮ ವಹಿಸುತ್ತೇವೆ. ಕಾಳಸಂತೆಯಲ್ಲಿ ಅಕ್ಕಿ ಮಾರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಉಮೇಶ್ ಕತ್ತಿ ತಿಳಿಸಿದರು.
Key words: Strict action -cancellation – unauthorized- ration card- Food Minister- Umesh katti