ಬೆಂಗಳೂರು,ಮಾ,18,2020(www.justkannada.in): ರಾಜ್ಯದಲ್ಲಿ ಕೊರೋನಾ ಸೋಂಕು ಹರಡದಂತೆ ತಡೆಯಲು ಅನೇಕ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ. ವಿದೇಶದಿಂದ ಬರುವವರ ಬಲಗೈಗೆ ಇಂದಿನಿಂದ ಸೀಲ್ ಹಾಕಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
ಕೊರೋನಾ ವೈರಸ್ ಕುರಿತು ವಿಧಾನಸಭೆಯಲ್ಲಿ ಇಂದು ಮಾತನಾಡಿದ ಸಚಿವ ಡಾ.ಕೆ ಸುಧಾಕರ್, ವಿದೇಶದಿಂದ ಬರುವವರಿಗೆ ಕ್ವಾರಂಟೈನ್ ನಲ್ಲಿ ಇಡುತ್ತೇವೆ. ಸೋಂಕು ಇದ್ದರೂ ಇಲ್ಲದಿದ್ದರೂ ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರೂಂಟೈನ್ ನಲ್ಲಿ ಅವರನ್ನ ಇಡುತ್ತೇವೆ. ಇದಕ್ಕಾಗಿ ಕೆಐಎಎಲ್ ನಲ್ಲಿ ಸುತ್ತಾಮುತ್ತಾ ವ್ಯವಸ್ಥೆ ಮಾಡಲಗಿದೆ. ಇಂದಿನಿಂದ ವಿದೇಶದಿಂದ ಬರುವ ಪ್ರಯಾಣಿಕರ ಬಲಗೈಗೆ ಸ್ಟಾಂಪ್ ಹಾಕಲಾಗುತ್ತದೆ. ಅವರು 15ದಿನಗಳ ಕಾಲ ಯಾರ ಜತೆಯೂ ಸಂಪರ್ಕದಲ್ಲಿರುವಂತಿಲ್ಲ ಎಂದು ತಿಳಿಸಿದರು.
ವಿದೇಶಗಳಿಂದ ಬರುವ ಪ್ರಯಾಣಿಕರ ಬಗ್ಗೆ ಕಟ್ಟೆಚ್ಚರ ವಹಿಸಲಾಗುತ್ತಿದ್ದು 3 ಗ್ರೂಪ್ ಗಳ ಮೂಲಕ ತಪಾಸಣೆ ಮಾಡಲಾಗುತ್ತಿದೆ. ಕರೋನಾ ತಡೆಗೆ ರಾಜ್ಯ ಸರ್ಕಾರ 200 ಕೋಟಿ ಹಣ ಕಾಯ್ದಿರಿಸಿದೆ. ಇಷ್ಟು ದೊಡ್ಡಮಟ್ಟದ ಹಣವನ್ನ ಯಾವ ರಾಜ್ಯವೂ ನೀಡಿಲ್ಲ ಎಂದ ಸಚಿವ ಸುಧಾಕರ್, ಕೊರೋನಾ ಬಂದ ತಕ್ಷಣ ಸಾಯುತ್ತೇವೆ ಎಂಬ ಭಯ ಬೇಡ. ಈ ವೈರಸ್ ನಿಂದ ಸಾವಿನ ಸಂಖ್ಯೆ ತೀರ ಕಡಿಮೆ. ಕರ್ನಾಟಕದಲ್ಲಿ 5 ಲ್ಯಾಬ್ ಗಳು ಇವೆ. ಈಗ ವಿಭಾಗೀಯ ಮಟ್ಟದಲ್ಲಿ ಲ್ಯಾಬ್ ತೆರೆಯುತ್ತೇವೆ. ಈವೆರಗೆ 1,17,366 ಮಂದಿ ತಪಾಸಣೆ ಮಾಡಿದ್ದೇವೆ ಬೆಂಗಳೂರಿನಲ್ಲಿ 86 ಸಾವಿರ ಮಂದಿಗೆ ತಪಾಸಣೆ ಮಾಡಿದ್ದೇವೆ. ರಾಜ್ಯದಲ್ಲಿ ಇದುವರೆಗೂ 14 ಪ್ರಕರಣಗಳು ದೃಢಪಟ್ಟಿವೆ ಎಂದು ಮಾಹಿತಿ ನೀಡಿದರು.
Key words: Strict action- corona –obstruction- Stamp – right hand – coming – abroad-Minister -Sudhakar