ಸಾರ್ವಜನಿಕರು ಎಚ್ಚರಿಕೆ ವಹಿಸದಿದ್ದರೆ ಕಠಿಣ ಕ್ರಮ ಅನಿವಾರ್ಯ- ಆರೋಗ್ಯ ಸಚಿವ ಕೆ. ಸುಧಾಕರ್…

ಬೆಂಗಳೂರು,ಮಾರ್ಚ್,16,2021(www.justkannada.in): ರಾಜ್ಯದಲ್ಲಿ ಕೋವಿಡ್ ಸಂಖ್ಯೆ ಹೆಚ್ಚಾಗ್ತಿದೆ. ಹೀಗಾಗಿ ಸಾರ್ವಜನಿಕರು ಮೈಮರೆತರೆ ಕಠಿಣ ಕ್ರಮ ಅನಿವಾರ್ಯವಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.jk

ಈ ಕುರಿತು ಇಂದು  ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್,  ರಾಜ್ಯದಲ್ಲಿ ಕೋವಿಡ್ ಸಂಖ್ಯೆ ಹೆಚ್ಚಾಗ್ತಿದೆ. ಇತ್ತ ಮಹಾರಾಷ್ಟ್ರದಲ್ಲಿ ಕೂಡ ಏರಿಕೆಯಾಗ್ತಿದೆ ಅಂತ ಎಚ್ಚರಿಕೆ ಕೊಟ್ಟಿದ್ದಾರೆ. ಸಿಎಂ ನಾಗರಿಕರಿಗೆ ಸ್ಪಷ್ಟವಾದ ಸಂದೇಶ ಕೊಟ್ಟಿದ್ದಾರೆ.  ಮಾಸ್ಕ್ ಸಾಮಾಜಿಕ ಅಂತರ ಕಾಪಾಡಿ ಅಂತಾ ಹೇಳಿದ್ದಾರೆ. ಇಲ್ಲದಿದ್ದರೆ ಕಠಿಣ ಕ್ರಮಕ್ಕೆ ಮುಂದಾಗಬೇಕಾಗುತ್ತೆ  ಎಂದು ಸಿಎಂ ಹೇಳಿದ್ದಾರೆಂದು ತಿಳಿಸಿದರು.Strict action - public –corona-rules-Minister –K.sudhakar

ನಾಳೆ ಪ್ರಧಾನಿ ಮೋದಿ ಜತೆ ವಿಡಿಯೋ ಕಾನ್ಫರೆನ್ಸ್ ಇದೆ.  ವಿಡಿಯೋ ಕಾನ್ಫರೆನ್ಸ್ ಬಳಿಕ ಸಿನಿಮಾ, ಧರಣಿ ಅಷ್ಟೇ ಅಲ್ಲಾ ಎಲ್ಲಾ ಚಟುವಟಿಕೆಗಳ ಮೇಲೂ ನಿಗಾ ಇಡಲಾಗುತ್ತದೆ. ವಿಡಿಯೋ ಕಾನ್ಫರೆನ್ಸ್ ವೇಳೆ ಕೆಲ ನಿರ್ದೇಶನ ಸಿಗಬಹುದು . ಸಭೆ ಬಳಿಕ ಸಿಎಂ ಬಿಎಸ್ ವೈ ನಿರ್ಧಾರ ತೆಗೆದುಕೊಳ್ಳುತ್ತಾರೆ. ಟಫ್ ರೂಲ್ಸ್ ಜಾರಿಯಾಗುತ್ತಾ ಕಾದು ನೋಡಬೇಕಿದೆ. ಪ್ರತಿಭಟನೆ, ಬಹಿರಂಗ ಸಭೆ-ಸಮಾರಂಭಗಳಿಗೆ ರೂಲ್ಸ್ ವಿಚಾರ ಕೂಡ ಆ ಬಳಿಕ ನಿರ್ಧಾರ ಆಗುತ್ತದೆ ಎಂದು ಸಚಿವ ಸುಧಾಕರ್ ತಿಳಿಸಿದರು.

English summary

“If people won’t follow guidelines implementation of tough rules will become inevitable: Health Minister K. Sudhakar
Bengaluru, Mar. 16, 2021 (www.justkannada.in): “We are about to witness the second wave of COVID-19 Pandemic. If people forget to follow the guidelines, implementing stringent rules may become inevitable,” warned Medical Education Minister Dr. K. Sudhkar.
Speaking to the media persons today he explained the number of Corona cases in both the states Karnataka and Maharashtra are increasing constantly. “The Chief Minister has given a clear message to the people of the State. They are asked to wear masks compulsorily and follow the earlier guidelines. Otherwise, implementation of stringent rules will become inevitable,” he added.Strict action - public –corona-rules-Minister –K.sudhakar
He also informed that there is a video conference with Prime Minister Narendra Modi tomorrow, following which all the places of public gathering like cinema halls, protests, etc., will be monitored closely. We are expecting a few instructions at the video conference. The Chief Minister will decide that. We have to wait and see whether tough rules will be implemented again, he said.
Keywords: Health Minister K. Sudhakar/ COVID-19 Pandemic/ Corona/ Karnataka/ Maharashtra/ guidelines/ tough rules

Key words: Strict action – public –corona-rules-Minister –K.sudhakar