ಬೆಂಗಳೂರು,ಜನವರಿ,6,2024(www.justkannada.in): ಹಿಟ್ ಅಂಡ್ ರನ್ ಕಾಯ್ದೆ ವಿರೋಧಿಸಿ ರಾಜ್ಯದಲ್ಲಿ ಜನವರಿ 17 ರಿಂದ ಲಾರಿ ಮಾಲೀಕರ ಸಂಘದಿಂದ ಮುಷ್ಕರ ಕೈಗೊಳ್ಳಲಾಗಿದೆ.
ಕೇಂದ್ರ ಕಾನೂನು ವಿರೋಧಿಸಿ ಲಾರಿ ಮಾಲೀಕರ ಸಂಘದಿಂದ ಮುಷ್ಕರ ಕೈಗೊಳ್ಳಲಾಗುತ್ತಿದೆ. ಈ ಕುರಿತು ಮಾತನಾಡಿರುವ ಲಾರಿ ಮಾಲೀಕರ ಸಂಘದ ಅಧ್ಯಕ್ಷ ನವೀನ್ ರೆಡ್ಡಿ, ಯಾವುದಾದ್ರೂ ಅಪಘಾತವಾದರೇ ಚಾಲಕರ ಮೇಲೆ ಹಲ್ಲೆ ನಡೆಯುತ್ತದೆ. ಹಿಂದಿ ಚಕ್ರಕ್ಕೆ ದ್ವಿಚಕ್ರವಾನ ಸಿಲುಕಿ ಅಪಘಾತವಾದರೇ ಚಾಲಕನ ಮೇಲೆ ಹಲ್ಲೆಯಾಗುತ್ತದೆ. ಅಪಘಾತವಾದ ಬಳಿಕ ಲಾರಿ ನಿಲ್ಲಿಸಿ ಬಂದರೇ ಅಲ್ಲಿರುವ ಜನರು ಚಾಲಕನೆ ಮೇಲೆ ಹಲ್ಲೆ ಮಾಡುತ್ತಾರೆ. ಆತ್ಮ ರಕ್ಷಣೆಗಾಗಿ ಲಾರಿ ಚಾಲಕರು ಸ್ಥಳೀಯ ಪೊಲೀಸ್ ಠಾಣೆಗೆ ಹೋಗಬೇಕು. ಹಿಟ್ ರನ್ ಪ್ರಕರಣ ಅಂತಾ ದಾಖಲು ಮಾಡಿ ಅಂದ್ರೆ ಎಷ್ಟು ಸರಿ ಕೇಂದ್ರ ಸರ್ಕಾರ ಕೂಡಲೇ ಈ ಕಾನೂನನ್ನ ರದ್ದು ಮಾಡಬೇಕು ಎಂದು ಆಗ್ರಹಿಸಿದರು.
ಇನ್ನು ಕಾನೂನು ರದ್ದಿಗೆ ಆಗ್ರಹಿಸಿ ಜನವರಿ 17ರಿಂದ ಲಾರಿ ಮಾಲೀಕರ ಸಂಘದಿಂದ ಅನಿರ್ಧಿಷ್ಟಾವಧಿ ಮುಷ್ಕರ ಹೂಡಲಾಗಿದೆ ಎಂದು ತಿಳಿಸಿದ್ದಾರೆ.
Key words: strike – Lorry Owners Association –from- January 17.