ಬೆಂಗಳೂರು,ಏಪ್ರಿಲ್,8,2021(www.justkannada.in): 6ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ಙಧಿಷ್ಠಾವದಿ ಮುಷ್ಕರ ನಾಳೆಯು ಮುಂದುವರೆಯಲಿದೆ ಎಂದು ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿಚಂದ್ರಶೇಖರ್ ತಿಳಿಸಿದ್ದಾರೆ.
ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಸಾರಿಗೆ ನೌಕರರಿಗೆ ಸಿಗುವಷ್ಟು ಕಡಿಮೆ ವೇತನ ಬೇರೆ ಯಾರಿಗೂ ಸಿಗಲ್ಲ. ಬೇರೆ ಯಾವುದೇ ನಿಗಮದ ನೌಕರರಿಗೂ ಇಷ್ಟು ಕಡಿಮೆ ವೇತನ ಸಿಗಲ್ಲ. ಶೇ.8ರಷ್ಟು ವೇತನ ಹೆಚ್ಚಳದ ಬಗ್ಗೆ ಮಾತನಾಡುತ್ತಾರೆ. ತಾರತಮ್ಯ ನೀತಿ ಮುಂದುವರೆಯಬಾರದು. ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಳ್ಳಬೇಕು ಎಂದು ಹೇಳಿದರು.
ಹಾಗೆಯೇ. ಕೆಲಸಕ್ಕೆ ಹಾಜರಾಗದಿದ್ರೆ ಮನೆ ಖಾಲಿಮಾಡುವಂತೆ ನೋಟಿಸಸ್ ನೀಡಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಕೋಡಿಹಳ್ಳಿ ಚಂದ್ರಶೇಖರ್, ಸಾರಿಗೆ ನೌಕರರಿಗೆ ನೋಟಿಸ್ ನೀಡಿದ್ದೀರಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಸರಿಯಾದ ಕ್ರಮವಲ್ಲ ಎಂದು ಖಂಡಿಸಿದರು.
Key words: strike – transport –workers- continues –tomorrow-Kodihalli Chandrashekhar.