ಬೆಂಗಳೂರು,ಡಿಸೆಂಬರ್ ,11,2020(www.justkannada.in): ಸಾರಿಗೆ ನೌಕರರನ್ನ ಸರ್ಕಾರಿ ನೌಕರ ಎಂದು ಘೋಷಣೆ ಮಾಡುವವರೆಗೂ ಸಾರಿಗೆ ನೌಕರರ ಮುಷ್ಕರ ಮುಂದುವರೆಯುತ್ತದೆ ಎಂದು ರೈತಮುಖಂಡ ಕೋಡಿಹಳ್ಳಿ ಚಂದ್ರ ಶೇಖರ್ ತಿಳಿಸಿದ್ದಾರೆ.
ಸಾರಿಗೆ ನೌಕರರನ್ನ ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ಸಾರಿಗೆ ನೌಕರರು ಬಸ್ ಸಂಚಾರ ಬಂದ್ ಮಾಡಿ ಏಕಾಏಕಿ ಮುಷ್ಕರ ಹೂಡಿದ್ದು ಸಾರಿಗೆ ನೌಕರರ ಹೋರಾಟಕ್ಕೆ ರೈತಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಬೆಂಬಲ ನೀಡಿದ್ದಾರೆ.
ಈ ಕುರಿತು ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೋರಾಟ ಮಾಡಿದವರನ್ನ ಸಭೆಗೆ ಕರೆದಿಲ್ಲ. ಹೋರಾಟ ಮಾಡದವರನ್ನ ಸಭೆಗೆ ಕರೆದಿದ್ದಾರೆ. ಸಾರಿಗೆ ನೌಕರರನ್ನ ಸರ್ಕಾರಿ ನೌಕರ ಎಂದು ಘೋಷಣೆ ಮಾಡುವವರೆಗೂ ಸಾರಿಗೆ ನೌಕರರ ಮುಷ್ಕರ ಅನಿರ್ಧಿಷ್ಟಾವಧಿಗೆ ಮುಂದುವರೆಯುತ್ತದೆ. ಸರ್ಕಾರ ಸಾರಿಗೆ ನೌಕರರ ಬೇಡಿಕೆಗಳಿಗೆ ಸ್ಪಂದಿಸಬೇಕು. ಸರ್ಕಾರಿ ನೌಕರರನ್ನಾಗಿ ಘೋಷಣೆ ಮಾಡಬೇಕು. ಇಲ್ಲದಿದ್ದರೇ ಈ ಚಳುವಳಿ ಮುಂದುವರೆಯುತ್ತದೆ ಎಂದು ತಿಳಿಸಿದ್ದಾರೆ.
English summary….
Transport Dept. employees protest won’t stop till State Govt. declares them as Govt. employees: Farmer leader Kodihalli Chandrashekar
Bengaluru, Dec. 11, 2020 (www.justkannada.in): “The transport department employees will continue till the State Government declares them as government employees,” said farmer leader Kodihalli Chandrashekar.
Addressing the press persons today at Bengaluru, he stated that it is an indefinite protest and it won’t stop till the employees’ demands are met. He demanded the State Govt. to declare them as government employees and fulfill all their demands.
Keywords: Kodihalli Chandrashekar/ Protest/ Transport Department
Key words: Strike -until -government -declares -governament employees-farmer leader-Kodihalli Chandrasekhar.