ಬೆಂಗಳೂರು,ಫೆಬ್ರವರಿ,21,2021(www.justkannada.in): ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗುವವರೆಗೂ ಹೋರಾಟ ಕೈಬಿಡಲ್ಲ. ಮೀಸಲಾತಿ ನೀಡುವವರೆಗೂ ನಾವು ಹೋಗಲ್ಲ. ನಾವು ಮೀಸಲಾತಿಯನ್ನ ತೆಗೆದುಕೊಂಡು ಹೋಗಲೇ ಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ನಗರದ ಅರಮನೆ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಲ್, ನಾವು ಮೀಸಲಾತಿಯನ್ನ ತೆಗೆದುಕೊಂಡು ಹೋಗಲೇ ಬೆಕು. ನಾನು ಮಂತ್ರಿ ಅಗಬೇಕಿಲ್ಲ ಮೀಸಲಾತಿ ಕೊಡಿಸಲು ಸಚಿವ ಸಿಸಿ ಪಾಟೀಲ್ ಯತ್ನಿಸುತ್ತಿದ್ದಾರೆ. ಗೃಹ ಸಚಿವ ಬೊಮ್ಮಾಯಿ ಅವರು ನಮಗೆ ಭರವಸೆ ನೀಡಲು ಬರ್ತಾರೆ. . ಬೇರೆಯವರ ತರ ನನಗೆ ಭರವಸೆ ಕೊಡ್ಬೇಡಿ. ಸತ್ಯ ಆಶ್ವಾಸನೆ ನೀಡಿ ಎಂದಿದ್ದೆ ಎಂದರು.
ನನಗೆ ನೋಟಿಸ್ ಕೊಡೊದ್ರಿಂದ ನನ್ನ ಬಾಯ್ ಬಂದ್ ಮಾಡೋಕ್ಕಾಗಲ, ಅದಕ್ಕೆಲ್ಲ ಹೆದ್ರೊ ಮಗ ನಾನಲ್ಲ. ಯಾರು ಹೆದರುವ ಅವಶ್ಯಕತೆ ಇಲ್ಲ ಪಂಚಮಸಾಲಿಯವರನ್ನು 3ಬಿಗೆ ಸೇರಿಸಿದ್ದೇ ನಾವು ಎಂದು ಹೇಳ್ತೀರಲ್ಲಾ.. ಎಲ್ಲಾ ಲಿಂಗಾಯಿತರು 3ಬಿ ಒಳಗೆ ಇದ್ದಾರೆ. ಅದರಲ್ಲೇನು ವಿಶೇಷ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸರ್ಕಾರದ ವಿರುದ್ದ ಗುಡುಗಿದರು.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಬೇಕೆಂದರೆ 25 ಎಂಪಿಗಳನ್ನು ಕರೆದುಕೊಂಡು ದೆಹಲಿಗೆ ಹೋಗಿ ಎಂದು ಸಿಎಂ ಹೇಳುತ್ತಾರೆ. ನಿಮ್ಮ ಕೈಲಿ ಚಾವಿ ಇಟ್ಕೊಂಡಿದ್ದೀರಾ ನಾನ್ಯಾಕ್ ಹೋಗಲಿ ಡೆಲ್ಲಿಗೆ? ನೀವೀರೋದ್ಯಾಕೆ? ನಾವು ವಿಧಾನಸೌಧ 3ನೇ ಮಹಡಿಯಲ್ಲಿಲ್ಲ. ಹೊಸ ನಾಟಕ ಕಂಪನಿ ಶುರು ಮಾಡಿದ್ದಾರೆ.
Key words: struggle – until –Panchamsali- community – reservations- Basanagowda Patil Yatnal.