“ವಿದ್ಯಾರ್ಥಿಗಳ ಸಾಧನೆಯೇ ಪೋಷಕರಿಗೆ, ಗುರುಗಳಿಗೆ ಹಾಗೂ ಶಿಕ್ಷಣ ಸಂಸ್ಥೆಗೆ ಹೆಮ್ಮೆ” : ಪಾಲಿಕೆ ಸದಸ್ಯೆ ನಿರ್ಮಲಾ ಹರೀಶ್

ಮೈಸೂರು,ಏಪ್ರಿಲ್,01,2021(www.justkannada.in) : ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿದರೆ, ಪೋಷಕರಿಗೆ, ಗುರುಗಳಿಗೆ ಹಾಗೂ ಶಿಕ್ಷಣ ಸಂಸ್ಥೆಗೆ ಹೆಮ್ಮೆಯಾಗುವುದು. ಪೋಷಕರು, ಗುರುಗಳಂತೆ ಶಾಲೆಯ ಆಡಳಿತ ಮಂಡಳಿಯ ನೆರವು ವಿದ್ಯಾರ್ಥಿಗಳ ಬೆಳವಣಿಗೆಗೆ ಅಗತ್ಯ ಎಂದು ಪಾಲಿಕೆ ಸದಸ್ಯ ನಿರ್ಮಲಾ ಹರೀಶ್ ಹೇಳಿದರು.

Illegally,Sand,carrying,Truck,Seized,arrest,driver

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನಿಂದ ಆಯೋಜಿಸಿದ್ದ 2019-20ನೇ ಸಾಲಿನ ರಾಜ್ಯಮಟ್ಟದ ಸರ್ ಸಿ.ವಿ.ರಾಮನ್ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ದಿ ಆಕ್ಮೆ ಸ್ಕೂಲ್ ನ ವಿದ್ಯಾರ್ಥಿಗಳಾದ ಎಂ.ಹಿತೇಶ್, ಜೆ.ಶ್ರೇಯಸ್ ಅವರಿಗೆ ಫಲಕ ನೀಡಿ ಶುಭ ಕೋರಿದರು.

ಬಳಿಕ ಮಾತನಾಡಿದ ಅವರು, ಆಂಗ್ಲ ಮಾಧ್ಯಮ ಶಾಲೆಯಲ್ಲಿ  ಓದುತ್ತಿದ್ದರೂ, ಕನ್ನಡ ರಸಪ್ರಶ್ನೆ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುವುದು ನಿಜಕ್ಕೂ ಸಂತೋಷ. ಈ ಶಾಲೆ ಮತ್ತಷ್ಟು ಎತ್ತರಕ್ಕೆ ಬೆಳಯಲಿ. ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಶಾಲೆಗೆ ಕೀರ್ತಿ ತರಲಿ ಎಂದು ಹಾರೈಸಿದರು.

students-Achievement-parents-Teachers-educational institution-Proud-Palike-Member-Nirmala Harish

ರೋಟರಿ ಮೈಸೂರು ಸೌತ್ ಈಸ್ಟ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜ್ಞಾನಶೇಖರ್ ಮಾತನಾಡಿ, ಕೊರೊನಾದಿಂದಾಗಿ ಇಂದು ಎಲ್ಲಾ ಕಾರ್ಯಕ್ರಮಗಳು ಸರಳವಾಗಿವೆ. ದಿ ಆಕ್ಮೆ ಸ್ಕೂಲ್ ಗುಣುಮಟ್ಟದ ಶಿಕ್ಷಣ ನೀಡುತ್ತಿದೆ ಎಂಬುದಕ್ಕೆ ರಾಜ್ಯಮಟ್ಟದಲ್ಲಿ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿರುವುದು ಸಾಕ್ಷಿಯಾಗಿದೆ ಎಂದು ಮೆಚ್ಚುಗೆವ್ಯಕ್ತಪಡಿಸಿದರು.

ಶಾಲೆಯನ್ನು ಉತ್ತಮವಾಗಿ ನಡೆಸುತ್ತಿದ್ದು, ಮತ್ತಷ್ಟು ಅಭಿವೃದ್ಧಿಯಾಗಲಿ. ಅದಕ್ಕೆ ನಮ್ಮ ಸಹಕಾರವಿದೆ. ವಿದ್ಯಾರ್ಥಿಗಳು ದೊಡ್ಡ ಕನಸುಗಳನ್ನು ಕಾಣಬೇಕು. ವಿಜ್ಞಾನಿಗಳಾಗಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ 2019-20ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಆರ್.ಧನುಶ್ರೀ, ಕೆ.ಎಂ.ಪ್ರಜ್ಞಾ ಅವರನ್ನು ಗೌರವಿಸಲಾಯಿತು.

students-Achievement-parents-Teachers-educational institution-Proud-Palike-Member-Nirmala Harish

ಕಾರ್ಯಕ್ರಮದಲ್ಲಿ ದಿ ಆಕ್ಮೆ ಸ್ಕೂಲ್ ಪ್ರಾಂಶುಪಾಲರಾದ ಆರ್.ಶುಭಾಷಿಣಿ,  ಕಾರ್ಯದರ್ಶಿ ಆರ್.ಅರುಣ್ ಸಿಂಗ್, ರೋಟರಿ ಮೈಸೂರು ಸೌತ್ ಈಸ್ಟ್ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ವಿಶ್ವನಾಥ್, ಸ್ಯಾಲಿಯನ್ ಇತರರು ಉಪಸ್ಥಿತರಿದ್ದರು.

key words : students-Achievement-parents-Teachers-educational institution-Proud-Palike-Member-Nirmala Harish