ವಿದ್ಯಾರ್ಥಿಗಳು ಅತ್ಯಂತ ಖುಷಿಯಿಂದ ಶಾಲೆಗೆ ಬಂದಿದ್ದಾರೆ: ಕಾಲೇಜಿಗೆ ಭೇಟಿ ಬಳಿಕ ಸಿಎಂ ಬೊಮ್ಮಾಯಿ ಹೇಳಿಕೆ.

ಬೆಂಗಳೂರು,ಆಗಸ್ಟ್,23,2021(www.justkannada.in):  ರಾಜ್ಯದಲ್ಲಿ ಕೋವಿಡ್ 3ನೇ ಅಲೆ ಭೀತಿ ನಡುವೆಯೇ  ಇಂದಿನಿಂದ 9.10 ಮತ್ತು ಪಿಯು ತರಗತಿಗಳು ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ  ಸ್ವತಃ ಸಿಎಂ ಬಸವರಾಜ್ ಬೊಮ್ಮಾಯಿ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂ ನ 18ನೇ ಕ್ರಾಸ್ ನಲ್ಲಿರುವ ಕಾಲೇಜಿಗೆ ಭೇಟಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಕಾಲೇಜು ಆವರಣದಲ್ಲಿ ಗಿಡನೆಟ್ಟು ನೀರೆರೆದರು. ಈ ವೇಳೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಮೊದಲಾದವರು ಸಿಎಂಗೆ ಸಾಥ್ ನೀಡಿದರು.

 ಕೊರೊನಾ ಮುಂಜಾಗೃತಾ ಕ್ರಮವಾಗಿ ಕಾಲೇಜಿನಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳನ್ನು, ಥರ್ಮಲ್ ಸ್ಕ್ರೀನಿಂಗ್, ಕೊಠಡಿಗಳಲ್ಲಿ ವಿದ್ಯಾರ್ಥಿಗಳ ಅಂತರ ಸೇರಿದಂತೆ ಖುದ್ದು ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕಳೆದ ಒಂದು ವರ್ಷದಿಂದ ಶಾಲಾಕಾಲೇಜು ಆರಂಭವಾಗಿರಲಿಲ್ಲ. ಮಕ್ಕಳ ಜತೆ ವಿವಿಧ ಕಾರ್ಯಕ್ರಮಗಳ ಮೂಲಕ ನಿರಂತರ ಸಂಪರ್ಕದಲ್ಲಿರಲಾಗಿತ್ತು.  ಕೋವಿಡ್ ಕಡಿಮೆಯಾದ ಹಿನ್ನೆಲೆ ಶಾಲೆ ಆರಂಭಿಸುವಂತೆ ತಜ್ಞರು ಸಲಹೆ ನೀಡಿದ್ದರು. ಹೀಗಾಗಿ ಶಾಲೆ ಕಾಲೇಜು ಆರಂಭಿಸಲಾಗಿದೆ ಎಂದರು.

ಹಾಗೆಯೇ ಮಕ್ಕಳು ಖುಷಿಯಿಂದ ಶಾಲೆಗೆ ಬಂದಿದ್ದಾರೆ. ಶಾಲೆ ಆರಂಭಿಸಿದ್ದಕ್ಕೆ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ ಎಂದರು.

ENGLISH SUMMARY….

Students are very happy to come to schools: CM Bommai says after visiting College
Bengaluru, August 23, 2021 (www.justkannada.in): Schools from ninth standard to 12th standards started working from today across the state even amidst the fear of COVID-19 Pandemic 3rd wave. The classes commenced at 9.10 am today. Chief Minister Basavaraj Bommai visited a college to wish the students.
The visited a college located at the 18th cross in Malleswaram, where he planted a sapling. He was accompanied by Education Minister B.C. Nagesh and Higher Education Minister Dr. C.N. Ashwathnarayana.
The ministers checked the precautionary measures taken at the college and also visited the classrooms.
Speaking later the Chief Minister explained that the schools were closed since the last one year. However the teachers were in contact with the students through online programs. However the schools and colleges have started working following improvement in the pandemic.
He also observed that the students were happy about the offline classes and informed that many of them thanked the government for allowing the schools to start.
Keywords: Chief Minister/ Schools/ Colleges/ commence/ visit

Key words: students – come – school –happy-CM Bommai