ಹಿಜಾಬ್ ಬೆನ್ನಲ್ಲೆ ಮತ್ತೊಂದು ವಿವಾದ: ಶಾಲೆಯಲ್ಲೇ ನಮಾಜ್ ಮಾಡಿದ ವಿದ್ಯಾರ್ಥಿಗಳು.

ಮಂಗಳೂರು,ಫೆಬ್ರವರಿ,12,2022(www.justkannada.in):  ರಾಜ್ಯದಲ್ಲಿ ಹಿಜಾಬ್ ವಿವಾದ ಸದ್ದು ಮಾಡುತ್ತಿರುವ ಬೆನ್ನಲ್ಲೆ ಇದೀಗ ಮತ್ತೊಂದು ವಿವಾದ ಉಂಟಾಗುವ ಸಾಧ್ಯತೆ ಇದೆ. ಹೌದು ದಕ್ಷಿಣ ಕನ್ನಡ ಮತ್ತು ಬಾಗಲಕೊಟೆಯಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳು ನಮಾಜ್ ಮಾಡಿರುವ ವಿಡಿಯೋ ಸದ್ಯ ವೈರಲ್ ಆಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲ್ಲೂಕಿನ ಅಂಕತಡ್ಕ ಸರ್ಕಾರಿ ಶಾಲೆಯಲ್ಲಿ ಐದು ಮಂದಿ ವಿದ್ಯಾರ್ಥಿಗಳು ಶಾಲೆಯಲ್ಲೇ ನಮಾಜ್ ಮಾಡಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ. ಕಳೆದ ಮೂರು ವಾರಗಳಿಂದ ಶಿಕ್ಷಕರ ಗಮನಕ್ಕೆ ತಾರದೆ ಶಾಲಾ ಕೊಠಡಿಯಲ್ಲಿ ಈ ವಿದ್ಯಾರ್ಥಿಗಳು ನಮಾಜ್ ಮಾಡಿದ್ದಾರೆ ಎನ್ನಲಾಗಿದೆ.

ಬಾಗಲಕೋಟೆಯಲ್ಲೂ  ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ನಮಾಜ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದ ಮೌಲಾನಾ ಆಜಾದ್ ಆಂಗ್ಲ ಮಾಧ್ಯಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ನಮಾಜ್ ಮಾಡಿದ್ದಾರೆ.

Key words: students -namaz – school

ENGLISH SUMMARY…

Another controversy following hijab: Students perform namaz in schools
Mangaluru, February 12, 2022 (www.justkannada.in): Even as the controversy over hijab is still fresh, another controversy has taken place. A few students in a school in Dakshin Kannada and Bagalkot have offered Namaz (prayers) in the school. The video has gone viral.
The incident of five students of the Antadka Government School, in Kadaba Taluk of Dakshin Kannada District offering namaz inside the school classroom has created another controversy. It is alleged that they have been offering prayers in the classroom from the last three days without bringing it to the notice of the teachers.
A same incident has taken place in Bagalkot and the video has gone viral. Students of the Moulana Azad English School in Ilkal town of Bagalkot District have allegedly offered namaz inside the classroom
Keywords: School/ controversy/ hijab/ namaz