ಮೈಸೂರು,ನವೆಂಬರ್,30,2020(www.justkannada.in): ವಿದ್ಯಾರ್ಥಿಗಳು ಕಾಲೇಜಿಗೆ ಬರುವ ಮನಸ್ಸು ಮಾಡ್ತಿಲ್ಲ. ಹೀಗಾಗಿ ಆನ್ ಲೈನ್ ತರಗತಿಗಳು ಮುಂದುವರೆಯುತ್ತದೆ ಎಂದು ಮೈಸೂರು ವಿವಿ ಕುಲಪತಿ ಡಾ.ಜಿ. ಹೇಮಂತ್ ಕುಮಾರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸೋಮವಾರ ಮಾತನಾಡಿದ ಮೈಸೂರು ವಿವಿ ಕುಲಪತಿ ಡಾ.ಜಿ. ಹೇಮಂತ್ ಕುಮಾರ್, ಶೇ.20ರಷ್ಟೇ ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಉತ್ಸಾಹಿಗಳಾಗಿದ್ದಾರೆ. ಕಾಲೇಜುಗಳು ಪ್ರಾರಂಭವಾಗಿ 15 ದಿನಗಳಾದರೂ ವಿದ್ಯಾರ್ಥಿಗಳು ಕಾಲೇಜಿಗೆ ಬರುವ ಮನಸ್ಸು ಮಾಡ್ತಿಲ್ಲ. ಈ ಹಿನ್ನೆಲೆ ಆನ್ ಲೈನ್ ತರಗತಿಗಳನ್ನ ಮುಂದುವರಿಸುತ್ತಿದ್ದೇವೆ ಎಂದರು.
ಕಾಲೇಜುಗಳಿಗೆ ಬರುವ ಎಲ್ಲ ವಿದ್ಯಾರ್ಥಿಗಳಿಗೂ ಕೋವಿಡ್ ಟೆಸ್ಟ್ ಮಾಡಿಸಲಾಗುತ್ತಿದೆ. ಈ ಮಧ್ಯೆ ಇಲ್ಲಿಯವರೆಗೂ ಯಾವುದೇ ಗಂಭೀರ ಪ್ರಕರಣಗಳು ಕಂಡುಬಂದಿಲ್ಲ. ಮೈಸೂರು ವಿವಿ ವ್ಯಾಪ್ತಿಯಲ್ಲಿ ಕೋವಿಡ್ ಸಮಸ್ಯೆ ಇಲ್ಲ. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯ ಮಾಡಿರುವ ಪರಿಣಾಮ ಕೋವಿಡ್ ನ ಯಾವುದೇ ಗಂಭೀರ ಪ್ರಕರಣ ಕಂಡುಬಂದಿಲ್ಲ ಎಂದು ತಿಳಿಸಿದರು.
ಗಾಯಕ ಎಸ್.ಪಿ.ಬಿ ಅಧ್ಯಯನ ಪೀಠ ಸ್ಥಾಪನೆ ಕುರಿತು ಹಂಸಲೇಖ ಅವರ ಜತೆ ಮಾತುಕತೆ…
ಮೈಸೂರು ವಿವಿಯಲ್ಲಿ ಗಾಯಕ ಎಸ್.ಪಿ.ಬಿ ಅಧ್ಯಯನ ಪೀಠ ಸ್ಥಾಪನೆ ವಿಚಾರ ಕುರಿತು ಮಾತನಾಡಿದ ಪ್ರೊ. ಜಿ.ಹೇಮಂತ್ ಕುಮಾರ್, ಹಿನ್ನೆಲೆ ಗಾಯಕ ದಿ.ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ಅಧ್ಯಯನ ಪೀಠ ಸ್ಥಾಪನೆ ಬಗ್ಗೆ ಈಗಾಗಲೇ ಸಂಗೀತ ನಿರ್ದೇಶಕ ಹಂಸಲೇಖ ಅವರೊಂದಿಗೆ ಮಾತುಕತೆ ನಡೆಸಿದ್ದೇವೆ. ಅಧ್ಯಯನ ಪೀಠಕ್ಕಾಗಿ 5 ಲಕ್ಷ ರೂ. ಹಣವನ್ನ ಯೋಜನೆ ರೂಪಿಸಲು ಇಟ್ಟಿದ್ದೇವೆ. ಒಂದು ವರ್ಷಗಳ ಎಸ್ ಪಿಬಿ ಕುರಿತ ಕಾರ್ಯಕ್ರಮ, ಸಂಶೋಧನಾ ಚಟುವಟಿಕೆ ನಡೆಸಲು ಉದ್ದೇಶಿಸಲಾಗಿದೆ. ಮಾನಸ ಗಂಗೋತ್ರಿ ಆವರಣದ ಲಲಿತಕಲಾ ಕಾಲೇಜಿನಲ್ಲಿ ಪೀಠ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.
english summary….
Students are not daring to come to the College, online classes will be continued: MU VC Dr. G. Hemanth Kumar
Mysuru, Nov. 30, 2020 (www.justkannada.in): The students are still scared to come to the college because of the Covid pandemic. Hence, online classes will be continued, said Dr. G. Hemanth Kumar, Vice-Chancellor, Mysore University.
He informed that students were not coming to the college even after 15 days after reopening. Hence, we have decided to continue conducting the classes online. Till now we have not found any severe case of COVID. Even though we are committed to ensuring that the students follow social distancing and follow other precautionary measures.
SPB Research Center in MU
On the occasion, he said that he had discussed with the renowned music director of Kannada film industry Sri Hamsalekha on establishing the S.P. Balasumbraniam Research Center in Mysore University. “We have reserved a sum of Rs.5 lakh for this plan. We have plans to conduct a one year-duration programme on SPB including research works. It will function from the Fine Arts College that is located in Manasa Gangotri campus, he said.
keywords: Online classes/ SPB Research Center/ Mysore University
Key words: students – online class- continues- Mysore university –VC-Dr.G. HemanthKumar.