ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನದ ಅನುಭವ ಹಂಚಿಕೊಂಡ ವಿದ್ಯಾರ್ಥಿಗಳು

ಬೆಂಗಳೂರು, ಜನವರಿ 06, 01, 2020 (www.justkannada.in): ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನದಲ್ಲಿ ವಿದ್ಯಾರ್ಥಿಗಳು ತಮ್ಮ ಕೆಲವು ಅಭಿಪ್ರಾಯವನ್ನು ಹಂಚಿಕೊಂಡರು.

ಹಲವಾರು ರಾಜ್ಯಗಳಿಂದ 107 ನೇ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಸಮ್ಮೇಳನವನ್ನು ನೋಡಲು ಬೆಂಗಳೂರಿಗೆ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಿಂದ ಆಗಮಿಸಿದ್ದಾರೆ ಇವರೊಟ್ಟೀಗೆ ಬೆಂಗಳೂರಿನ ಹಲವ ಶಾಲಾ ಮಕ್ಕಳೂ ಕೂಡ ಭಾಗವಹಿಸಿದ್ದಾರೆ.

ಪ್ರದಾನಮಂತ್ರಿ ಮೋದಿ ಅವರ ಭಾಷಣ ಕೇಳಿದ ವಿದ್ಯಾರ್ಥಿಗಳು ಮೋದಿ ಹೇಳಿದ ಗ್ರಾಮೀಣ ಅಭಿವೃದ್ಧಿ, ರೈತರಿಗೆ ಕೃಷಿ ಪ್ರೋತ್ಸಾಹ ವಿಷಯಗಳು, ವಿದ್ಯಾರ್ಥಿಗಳನ್ನು ವೈಜ್ಞಾನಿಕ ಉದ್ದೇಶದಿಂದ ಪ್ರೋತ್ಸಾಹಿಸುವುದು,
ಇದು ನಮ್ಮೆಲ್ಲರಿಗೂ ಪ್ರೇರಕವಾಗಿದೆ ಎಂದು ಮಕ್ಕಳು ಹಂಚಿಕೊಂಡರು.

ಸೌರಶಕ್ತಿ ಕೃಷಿ ದ್ವಿಚಕ್ರ, ಕೆಮಿಕಲ್ ಅಂಡ್ ಪೆಟ್ರೋಕೆಮಿಕಲ್, ಸುಧಾರಿತ ವಿಜ್ಞಾನ ಮತ್ತು ತಂತ್ರಜ್ಞಾನಕ್ಕಾಗಿ ಸಂಸ್ಥೆ ವಿವರಗಳು, ರಿವರ್ ವಾಟರ್ ಪ್ಯೂರಿಫೈಯರ್, ಮಾಲಿನ್ಯ ರಹಿತ ವಾಹನಗಳಂತಹ ಅನೇಕ ಕೃಷಿ ಸಂಬಂಧಿತ ಸ್ಟಾಲ್‌ಗಳಿಗೆ ವಿದ್ಯಾರ್ಥಿ ಭೇಟಿ ನೀಡಿದರು. ಕೃಷಿ ಮತ್ತು ತಂತ್ರಜ್ಞಾನದ ಪ್ರಗತಿಗೆ ಹೊಸ ಸಾಧನಗಳನ್ನು ನಾವು ತಿಳಿದುಕೊಂಡಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.
– ದಿವ್ಯಶ್ರೀ .ಕೆ
1st MAJ