ಮೈಸೂರು,ಡಿಸೆಂಬರ್,20,2020(www.justkannada.in) : ಸಿದ್ದಲಿಂಗಪುರ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕೊರೊನಾ ಹಿನ್ನೆಲೆ ಸರಳವಾಗಿ ಷಷ್ಠಿ ಪೂಜೆ. ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ.
ಪ್ರತಿವರ್ಷ ವೈಭವದಿಂದ ನಡೆಯುತ್ತಿದ್ದ ಸುಬ್ರಮಣ್ಯ ಷಷ್ಠಿ ಪೂಜೆಗೆ ಮೈಸೂರು, ಮಂಡ್ಯ, ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಿಂದ ಬರುತ್ತಿದ್ದ ಭಕ್ತಾದಿಗಳು. ಈ ಬಾರಿ ಕೊರೊನ ಹಿನ್ನೆಲೆ ಸರಳವಾಗಿ ಆಚರಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಲಾಗಿದೆ.
ಈ ಬಾರಿ ಷಷ್ಠಿ ಜಾತ್ರಾ ಮಹೋತ್ಸವ ರದ್ದು ಮಾಡಿ ದೇವಾಲಯ ಆವರಣದಲ್ಲಿ ಅರ್ಚಕರಿಂದಲೇ ಪೂಜೆ. ಮುಂಜಾನೆಯೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಸೇರಿ ವಿವಿಧ ಪೂಜೆ. ಮುಂಜಾನೆ ೫ ರಿಂದ ಬೆಳಿಗ್ಗೆ ೭ ರ ವರೆಗೆ ನಡೆದ ಪೂಜಾ ಕೈಂಕರ್ಯ ನಡೆಯಿತು.
ಪೊಲೀಸ್ ಬಿಗಿ ಭದ್ರತೆ
ದೇವಾಲದ ಪ್ರವೇಶ ದ್ವಾರ ಮುಚ್ಚಿ ದೇವರಿಗೆ ವಿಶೇಷ ಪೂಜೆ. ಸಾರ್ವಜನಿಕರು ಬಾರದಂತೆ ತಡೆಯಲು ಪೊಲೀಸರಿಂದ ಬಿಗಿ ಭದ್ರತೆ. ಪೂಜೆ ಮುಗಿಸಿ ದೇವಾಲಯದ ಬಾಗಿಲು ಮುಚ್ಚಿದ ಅರ್ಚಕರು.
ಸಾರ್ವಜನಿಕರು ದೇವಾಲಯದ ಎದುರು ನಿಲ್ಲಲೂ ಪೊಲೀಸರು ಅವಕಾಶ ನೀಡುತ್ತಿಲ್ಲ. ಹೀಗಾಗಿ, ದೇವಾಲಯಕ್ಕೆ ಪ್ರವೇಶವಿಲ್ಲ ಎಂಬುದನ್ನು ಅರಿಯದೆ ತಂಡೋಪತಂಡವಾಗಿ ಆಗಮಿಸುತ್ತಿರುವ ಭಕ್ತರು ದೇವಾಲಯದ ಎದುರು ಕೈಮುಗಿದು ತೆರಳುತ್ತಿದ್ದಾರೆ.
key words : Subrahmanyeswara-Siddalingapura-Shashti Puja-Swami-Temple-Restriction-public-access