ಶ್ರೀಹರಿಕೋಟಾ,ಫೆಬ್ರವರಿ,10,2023(www.justkannada.in): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಭಿನ್ನ ಪ್ರಯೋಗಗಳನ್ನು ಒಳಗೊಂಡಿರುವ ಮತ್ತು ನೂತನವಾಗಿ ಅಭಿವೃದ್ಧಿಪಡಿಸಲಾದ SSLV D2 ರಾಕೆಟ್ ಅನ್ನು ಯಶಸ್ವಿಯಾಗಿ ಉಡಾಯಿಸಿದೆ.
ಆಂಧ್ರದ ತಿರುಪತಿಯ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು ಬೆಳಗ್ಗೆ 9:18ಕ್ಕೆ SSLV-D2 ರಾಕೆಟ್ ಉಡಾವಣೆ ಮಾಡಲಾಯಿತು. ಇಒಎಸ್-07, ಜೇನಸ್-1 ಮತ್ತು ಆಜಾದಿಸ್ಯಾಟ್-2 ಎಂಬ ಮೂರು ಉಪಗ್ರಹಗಳನ್ನು ಹೊತ್ತು ಎಸ್ಎಸ್ಎಲ್ವಿ-ಡಿ2 ನಭಕ್ಕೆ ಹಾರಿದೆ.
ಭೂಮಿಯಿಂದ 450 ಕಿಮೀ ಎತ್ತರದ ಕಕ್ಷೆಯೊಂದರಲ್ಲಿ ಈ ಮೂರು ಉಪಗ್ರಹಗಳನ್ನು ಸೇರಿಸುವ ಕೆಲಸ ಈ ರಾಕೆಟ್ ನದ್ದು. ಇಒಎಸ್-07 ಸೆಟಿಲೈಟ್ ಅನ್ನು ಇಸ್ರೋ ಸಂಸ್ಥೆಯೇ ತಯಾರಿಸಿದೆ. ಜೇನಸ್-1 ಸೆಟಿಲೈಟ್ ಅಮೆರಿಕದ ಅಂಟಾರಿಸ್ ಸಂಸ್ಥೆ ನಿರ್ಮಿಸಿದರೆ, ಚೆನ್ನನ ಸ್ಪೇಸ್ ಕಿಡ್ಸ್ ಸಂಸ್ಥೆಯು ಆಜಾದಿಸ್ಯಾಟ್-2 ಸೆಟಿಲೈಟನ್ನು ನಿರ್ಮಿಸಿದೆ.
Key words: Successful-launch – ISRO-SSLV-D2 -rocket – three satellites