ಬೆಂಗಳೂರು, ಜನವರಿ 02, 2021 (www.justkannada.in): ಇನ್ಫೋಸಿಸ್ ಫೌಂಡೇಶನ್ನ ಅಧ್ಯಕ್ಷೆ ಹುದ್ದೆಯನ್ನುಅಂತಿಮವಾಗಿ ಅದನ್ನು ತ್ಯಜಿಸಲು ಸುಧಾಮೂರ್ತಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಡಿಸೆಂಬರ್ 31ಕ್ಕೆ ತಾನು ಇನ್ಫೋಸಿಸ್ ಫೌಂಡೇಶನ್ನಿಂದ ನಿವೃತ್ತಿ ಪಡೆಯುವುದಾಗಿ ಸುಧಾ ಮೂರ್ತಿ ಕಳೆದ ವರ್ಷವೇ ಘೋಷಿಸಿದ್ದರು.
ಇನ್ಫೋಸಿಸ್ ಪ್ರತಿಷ್ಠಾನಕ್ಕೆ ಕಳೆದ ಡಿಸೆಂಬರ್ 31ಕ್ಕೆ 25 ವರ್ಷಗಳು ತುಂಬಿದೆ. ಹೀಗಾಗಿ ಬಹಳ ಹಿಂದೆಯೇ ಈ ಕುರಿತು ಸುಧಾಮೂರ್ತಿ ನಿರ್ಧರಿಸಿದ್ದರು ಎನ್ನಲಾಗಿದೆ.
ನಿವೃತ್ತಿ ನಂತರ ತಾನು ಕುಟುಂಬದ ಮೂರ್ತಿ ಫೌಂಡೇಶನ್ನ ಮುಖ್ಯಸ್ಥರ ಸ್ಥಾನದಲ್ಲಿ ಕುಳಿತು ಇದೇ ಕೆಲಸ ಮುಂದುವರೆಸುವುದಾಗಿ ಸುಧಾಮೂರ್ತಿ ತಿಳಿಸಿದ್ದಾರೆ.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ನಮ್ಮ ಸಹಾಯ ಮತ್ತು ಕೆಲಸ ನಿರಂತರವಾಗಿ ಮುಂದುವರೆಯುತ್ತಿರುತ್ತದೆ ಎಂದಿದ್ದಾರೆ.