ಬೆಂಗಳೂರು,ಜನವರಿ,26,2023(www.justkannada.in): ಕೋವಿಡ್ ವೇಳೆ ಹಗರಣವಾಗಿದೆ. ಈ ಕುರಿತು ತನಿಖೆ ಮಾಡುವ ಬಗ್ಗೆ ಸುಧಾಕರ್ ಮಾತೇ ಆಡುವುದಿಲ್ಲ. ತನಿಖೆಯಾದರೇ ಸುಧಾಕರ್ ಮೇಲಿನ ಆರೋಪ ಬಯಲಾಗುತ್ತದೆ ಎಂದು ವಿಪಕ್ಷ ನಾಯಕ ಸಿದ‍್ಧರಾಮಯ್ಯ ಕಿಡಿಕಾರಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಒಂದಂಕಿ ಲಾಟರಿ ಬಗ್ಗೆ ದೇವೇಗೌಡರು ಪ್ರಸ್ತಾಪ ಮಾಡಿದ್ದರು. ನನ್ನ ಮತ್ತು ಕೆಜೆ ಜಾರ್ಜ್ ವಿರುದ್ಧ ಆರೋಪ ಮಾಡಿದರು. ನನ್ನ ಮೇಲೆ ಆರೋಪ ಮಾಡಿದಾಗ ಏನಾದರೂ ದಾಖಲೆ ಕೊಟ್ಟಿರಲಿಲ್ಲ. ಆದರೂ ಆಗ ನಾನು ಕೂಡಲೇ ಸಿಬಿಐ ತನಿಖೆಗೆ ವಹಿಸಿದ್ದೆ. ಡಿಕೆ ರವಿ, ಡಿವೈಎಸ್ ಪಿ ಗಣಪತಿ ಪ್ರಕರಣವನ್ನೂ ಸಿಬಿಐಗೆ ವಹಿಸಿದ್ದ. ಶ್ವೇತ್ರ ಪತ್ರ ಅನ್ನೋದು ಒಂದು ಸುಳ್ಳಿನ ಕಂತೆ ಎಂದು ಟೀಕಿಸಿದರು.
ಬಿಜೆಪಿಯವರೆಲ್ಲರೂ ಭ್ರಷ್ಟಾಚಾರಿಗಳಾಗಿ ಹೆಸರು ಕೆಡಿಸಿಕೊಂಡಿದ್ದಾರೆ. ಅಮಿತ್ ಶಾ ಜೈಲಿಗೆ ಹೋಗಿ ಬಂದಿದ್ದಾರೆ. ಅವರನ್ನ ಕರೆಸಿಕೊಂಡು ಮತ ಕೇಳುದ್ರೆ ಆಗುತ್ತಾ. ಅಮಿತ್ ಶಾ ಮೋದಿ ನೂರು ಸಾರಿ ಬಂದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ಸಿದ್ಧರಾಮಯ್ಯ ಹೇಳಿದರು.
ಆತ ಮಿನಿಸ್ಟರ್ ಆಗಲು ಲಾಯಕ್ಕಿಲ್ಲ.
ಇನ್ನು ಭ್ರಷ್ಟಾಚಾರ ಮಾಡಿದ್ದರೇ ನೇಣಿಗೆ ಹಾಕಿ ಎಂದು ಹೇಳಿಕೆ ನೀಡಿದ ಸಚಿವ ಸುಧಾಕರ್ ವಿರುದ್ಧ ಚಾಮರಾಜನಗರದಲ್ಲಿ ಕಿಡಿಕಾರಿದ ಸಿದ್ಧರಾಮಯ್ಯ, ಆತ ನೇಣು ಹಾಕಿಕೊಳ್ಳುವುದು ಬೇಡ. ಆತ ಬದುಕಿರಲಿ. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 36 ಜನ ಆಕ್ಸಿಜನ್ ಇಲ್ಲದೆ ಸತ್ತರು 36 ಜನ ಸತ್ತರೂ ಆತ 3 ಜನ ಸತ್ತರು ಎಂದು ಸುಳ್ಳು ಹೇಳಿದ. ಆತ ಮಿನಿಸ್ಟರ್ ಆಗಲು ಲಾಯಕ್ಕಿಲ್ಲ. ತನಿಖೇ ಮಾಡಲಿ ಎಂದು ಹರಿಹಾಯ್ದರು.
Key words: Sudhakar – investigate-not -fit – minister-Former CM- Siddaramaiah.