ಬೆಂಗಳೂರು,ಆ,31,2019(www.justkannada.in): ಬೆಂಗಳೂರಿನಲ್ಲಿ ವಾಹನ ಸಂಚಾರ ದಟ್ಟಣೆ ನಿವಾರಿಸುವ ಕುರಿತು ಅಧಿಕಾರಿಗಳಿಂದ ವಿವಿಧ ಸಲಹೆಗಳು ಬಂದಿವೆ: ಈ ಬಗ್ಗೆ ಸಿಎಂ ಬಿಎಸ್ ವೈ ಜತೆ ಚರ್ಚಿಸುತ್ತೇನೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ತಿಳಿಸಿದರು.
ಬೆಂಗಳೂರು ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆ ಜೊತೆಗೆ ಡಿಸಿಎಂ ಅಶ್ವತ್ ನಾರಾಯಣ್ ಸಭೆ ನಡೆಸಿದರು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿಎಂ ಅಶ್ವಥ್ ನಾರಯಣ್, ಇವತ್ತಿನ ಸಭೆಯನ್ನು ಸಿಎಂ ಬಿಎಸ್ ವೈ ಮಾಡಬೇಕಿತ್ತು. ಆದರೆ ನೆರೆಸಂತ್ರಸ್ಥರ ಪ್ರದೇಶಗಳಿಗೆ ಸಿಎಂ ಹೋಗಿರುವ ಕಾರಣ. ಅವರು ಈ ಸಭೆಯನ್ನು ತೆಗೆದುಕೊಳ್ಳೋಕೆ ಆಗಿಲ್ಲ. ಹೀಗಾಗಿ ನನ್ನ ಅಧ್ಯಕ್ಷತೆಯಲ್ಲಿ ಈ ಸಭೆ ನಡೆದಿದೆ. ವಿವಿಧ ಇಲಾಖೆಯ ಮುಖ್ಯಸ್ಥರು ಇಂದು ಸಭೆಯಲ್ಲಿ ಪಾಲ್ಗೊಂಡಿದ್ರು. ಅವರು ಕೆಲವೊಂದಿಷ್ಟು ಸಮಸ್ಯೆಗಳನ್ನು ಹೇಳಿದ್ದಾರೆ. ಅದನ್ನು ಸಿಎಂ ಜೊತೆ ಚರ್ಚಿಸಿ, ಬಗೆ ಹರಿಸುವ ಕೆಲಸ ಮಾಡ್ತೀವಿ. ಟ್ರಾಫಿಕ್, ರಸ್ತೆ ಸಮಸ್ಯೆಗಳು ಪ್ರಮುಖ ಆಗಿವೆ ಎಂದರು.
ಸಭೆಯಲ್ಲಿ ರಿವೈಸ್ಡ್ ಮಾಸ್ಟರ್ ಪ್ಲಾನ್ ನಲ್ಲಿ ಸಮಸ್ಯೆಗಳಿರುವ ಬಗ್ಗೆ ಚರ್ಚೆ ಆಯ್ತು ಈ ಬಗ್ಗೆಯೂ ಅಧಿಕಾರಿಗಳು ಸಲಹೆ ಕೊಟ್ಟಿದ್ದಾರೆ. ಆಡಳಿತ ವ್ಯವಸ್ಥೆಯಲ್ಲಿ ಸ್ಬಲ್ಪ ಬದಲಾವಣೆ ತರಬೇಕು.ಇದ್ರ ಕುರಿತು ಸಿಎಂ ಬಳಿ ಚರ್ಚೆ ಮಾಡಿ ಕಾರ್ಯರೂಪಕ್ಕೆ ತರೋ ಕೆಲಸ ಮಾಡ್ತೀವಿ ಎಂದರು.
ನಗರದಲ್ಲಿನ ವಾಹನ ಸಂಚಾರ ದಟ್ಟಣೆ ನಿವಾರಿಸಲು ಹಲವು ಸಲಹೆಗಳನ್ನ ನೀಡಿದ್ದಾರೆ. 10 ಸಾವಿರ ಎಲೆಕ್ಟ್ರಿಕಲ್ ವಾಹನಗಳನ್ನ ಖರಿದೀಸಿ. ಸಬ್ ಸರ್ಬನ್ ರೈಲು ಬೇಗ ತನ್ನಿ. ಮೆಟ್ರೋ ವಿಸ್ತರಣೆ ಮಾಡಿ, ವೇಗ ಹೆಚ್ಚಳ ಮಾಡಿ. ಫೆರಿಪೆರಲ್ ರಸ್ತೆ ಮಾಡಿ, ಎಲಿವೇಟೆಡ್ ಕಾರಿಡಾರ್ ಮಾಡಿ. ಇದಕ್ಕೆ ಬೇಕಾದ ಭೂಸ್ವಾಧೀನ ಸಮಸ್ಯೆ ನಿವಾರಣೆ ಹೇಗೆ ಅನ್ನೋದು ಸೇರಿದಂತೆ ಹಲವು ಸಲಹೆಗಳನ್ನು ನೀಡಿದ್ದಾರೆ. ಎಲ್ಲವನ್ನೂ ಮುಖ್ಯಮಂತ್ರಿಗಳ ಚರ್ಚಿಸಿ ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ಅಶ್ವತ್ ನಾರಾಯಣ್ ತಿಳಿಸಿದರು.
Key words: suggestions – alleviating -traffic congestion – Bangalore- DCM -Ashwath Narayan.