ಹೈದರಾಬಾದ್, ಸೆಪ್ಟೆಂಬರ್ 09, 2020 (www.justkannada.in): ತೆಲುಗು ಜನಪ್ರಿಯ ಕಿರುತೆರೆ ನಟಿ ಶ್ರಾವಣಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹೈದರಾಬಾದ್ನ ಎಸ್.ಆರ್. ನಗರದ ಮಧುರಾ ನಗರದಲ್ಲಿ ತಮ್ಮ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆಂಧ್ರ ಪ್ರದೇಶದ ಕಾಕಿನಾಡ ಮೂಲದ ಶ್ರಾವಣಿ ಹೈದರಾಬಾದ್ನದಲ್ಲಿ ವಾಸಿಸುತ್ತಿದ್ದರು. ‘ಮನಸು ಮಮತ’ ಹಾಗೂ ‘ಮೌನರಾಗಂ’ ಧಾರಾವಾಹಿ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು.
ಕೆಲವು ದಿನಗಳ ಹಿಂದೆ ಟಿಕ್ಟಾಕ್ನಲ್ಲಿ ಪರಿಚಯವಾದ ದೇವರಾಜು ರೆಡ್ಡಿ ಪ್ರೀತಿಯ ನಾಟಕವಾಡಿ, ಖಾಸಗಿ ಪೋಟೋ ತೆಗೆದು ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ನೀಡಿ ಹಣಕ್ಕಾಗಿ ಪೀಡಿಸುತ್ತಿದ್ದನು ಎಂದು ಶ್ರಾವಣಿ ಎಸ್.ಆರ್. ನಗರದಲ್ಲಿ ದೂರು ನೀಡಿದ್ದಳು ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.