ಮೈಸೂರು,ಏಪ್ರಿಲ್,08,2021(www.justkannada.in) : ವಿಶ್ವ ಆರೋಗ್ಯ ದಿನಾಚರಣೆ ಪ್ರಯುಕ್ತ ಸುಜೀವ್ ಸಂಸ್ಥೆ ವತಿಯಿಂದ ಸೌಲಭ್ಯ ವಂಚಿತ ಕುಟುಂಬ ಮತ್ತು ವಿಕಲಚೇತನರಿಗೆ ಅಗತ್ಯ ನೆರವು ನೀಡಲಾಯಿತು.ಸುಜೀವ್ ಸಂಸ್ಥೆಯ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ರಾಜಾ ರಾಮ್ ನೇತೃತ್ವದಲ್ಲಿ ಎರಡು ತಿಂಗಳಿಗಾಗುವ ಅಕ್ಕಿ, ದವಸ ಧಾನ್ಯ ಹಾಗೂ ಆಹಾರ ಪದಾರ್ಥದ ಕಿಟ್ ಗಳನ್ನು ವಿತರಣೆ ಮಾಡಲಾಯಿತು.
ವೈಯಕ್ತಿಕವಾಗಿ 5 ಸಾವಿರ ರೂ. ಪರಿಹಾರದ ಚೆಕ್ ವಿತರಿಸಿದರು. ನಂಜನಗೂಡು ತಾಲ್ಲೂಕಿನ ಆಲಂಬೂರು ಗ್ರಾಮದಲ್ಲಿ ವಿಕಲ ಚೇತನ ಸಹೋದರಿಯರಿಗೆ ಸರ್ಕಾರದ ಸೌಲಭ್ಯ ಇಲ್ಲದೆ ನರಳಾಡುತ್ತಿದ್ದರು. ಹೊರಳವಾಡಿ ಗ್ರಾಮದ ಹಂದಿ ಜೋಗಿ ಕುಟುಂಬ ಎಪ್ಪತ್ತು 80 ವರ್ಷಗಳಿಂದ ವಾಸದ ಮನೆ ಇಲ್ಲದೆ ಪರದಾಡುತ್ತಿದ್ದರು. ಈ ವಿಚಾರ ತಿಳಿದ ರಾಜಾ ರಾಮ್ ಇಂದು ಮೂರು ಕಡೆಗೂ ಭೇಟಿ ನೀಡಿ ಸಹಾಯಧನದ ಚೆಕ್ ಜೊತೆಗೆ ಆಹಾರ ಪದಾರ್ಥದ ದವಸ ಧಾನ್ಯಗಳ ಕಿಟ್ ಗಳನ್ನು ವಿತರಿಸಿದರು.
ಬಳಿಕ ಮಾತನಾಡಿದ ಅವರು, ರಾಜಾರಾಂ ನಂಜನಗೂಡು ತಾಲ್ಲೂಕಿನ ಆಲಂಬೂರು ಗ್ರಾಮದ ವಿಕಲಚೇತನ ಸಹೋದರಿಯರು ಮತ್ತು ಹುಲ್ಲಹಳ್ಳಿ ಗ್ರಾಮದ ವಿಕಲಚೇತನ ವ್ಯಕ್ತಿಯೋರ್ವರು ಹುಟ್ಟಿನಿಂದಲೂ ಕೊಡ ವಿಕಲಚೇತನರಾಗಿದ್ದಾರೆ. ಇವರುಗಳ ಪರಿಸ್ಥಿತಿಯನ್ನು ನೋಡಿದರೆ ಕಣ್ಣೀರು ಬರುವುದರ ಜತೆಗೆ ಮೈ ಜುಮ್ಮೆನ್ನುವಂತಿದೆ ಯಾವ ಪಾಪದ ಫಲಕ್ಕಾಗಿ ಇಂತಹ ಶಿಕ್ಷೆ ಎಂಬ ಪ್ರಶ್ನೆ ಮೂಡುತ್ತದೆ ಎಂದು ಬೇಸರವ್ಯಕ್ತಪಡಿಸಿದರು.
ಸರಕಾರದಿಂದ ಪಿಂಚಣಿ ಸೌಲಭ್ಯ ಹೊರತುಪಡಿಸಿ ಇನ್ಯಾವುದೇ ಸೌಲಭ್ಯ ದೊರಕದೇ ಇರುವ ವಿಚಾರವನ್ನು ತಿಳಿದುಕೊಂಡು ನಮ್ಮ ಸಂಸ್ಥೆಯ ಮೂಲಕ ಇವರಿಗೆ ದೊರಕಬೇಕಾದ ಸೌಲಭ್ಯ ಸವಲತ್ತುಗಳನ್ನು ಕಲ್ಪಿಸಿ ಅವರ ಜೊತೆ ಸದಾಕಾಲ ಇರುತ್ತೆವೆ ಪ್ರತಿ ತಿಂಗಳು ಅವರ ಬ್ಯಾಂಕ್ ಖಾತೆಗೆ 5ಸಾವಿರ ವಿತರಿಸುವುದರ ಜತೆಗೆ ಆಹಾರ ಪದಾರ್ಥಗಳನ್ನು ನೀಡುತ್ತೇವೆ ಎಂದು ಭರವಸೆ ನೀಡಿದರು.
ನಂತರ ಹೊರಳವಾಡಿ ಗ್ರಾಮದ ಹಂದಿಜೋಗಿ ಕುಟುಂಬ ಎಪ್ಪತ್ತು ಎಂಬತ್ತು ವರ್ಷಗಳಿಂದ ವಾಸಿಸುತ್ತಿರುವವರಿಗೆ ವಾಸಮಾಡಲು ಸರ್ಕಾರ ಅವರಿಗೆ ಒಂದು ಸೂರು ಸಹ ಕಲ್ಪಿಸಿಲ್ಲ. ಊರಿನಲ್ಲಿ ಸೂಕ್ತವಾದ ಸ್ಥಳ ತೋರಿಸಿಕೊಟ್ಟರೆ ಅವರಿಗೆ ಸೂರು ಕಲ್ಪಿಸಿಕೊಡಲು ನಮ್ಮ ಸಂಸ್ಥೆಯಿಂದ ನಾನು ಮುಂದಾಗುತ್ತೇನೆ ಎಂದು ತಿಳಿಸಿದರು.
key words : Sujeev-Institute-way-Facility-deprived-family-disabled-Necessary-assistance