ಮಂಡ್ಯ,ಮೇ,2,2019(www.justkannada.in): ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ರೆಬಲ್ ಕಾಂಗ್ರೆಸ್ ಮುಖಂಡರು ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಜತೆ ಸಭೆ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಶಾಸಕ ಚಲುವರಾಯಸ್ವಾಮಿ, ನಿನ್ನೆ ನಡೆದ ಸಭೆಯಿಂದ ಯಾರಿಗೂ ತಳಮಳ ಆಗಿಲ್ಲ. ನಾವು ಯಾರೂ ಸಹ ಸುಮಲತಾ ಅಂಬರೀಶ್ ಪರ ಪ್ರಚಾರ ಮಾಡಿಲ್ಲ ಎಂದು ಹೇಳಿದ್ದಾರೆ.
ನಮ್ಮ ಸ್ನೇಹಿತರು ಅಪರೂಪಕ್ಕೆ ಸಿಕ್ತಾರೆ. ಈ ವೇಳೆ ಭೇಟಿಯಾಗುತ್ತೇವೆ.ಸ್ಥಳೀಯರೊಬ್ಬರ ಕಾರ್ಯಕ್ರಮ ಇತ್ತು ಹೋಗಿದ್ದವು. ಸಚ್ಚಿದಾನಂದ ಅವರ ಹುಟ್ಟುಹಬ್ಬವಿತ್ತು. ಹೀಗಾಗಿ ಹೋಗಿದ್ದವು. ಅಲ್ಲಿಗೆ ಸುಮಲತಾ ಅವರು ಬಂದಿದ್ದರು. ಹೀಗಾಗಿ ಅವರು ಬಂದರೇ ಬರಬೇಡಿ ಎಂದು ಹೇಳಲು ಆಗುತ್ತಾ ಎಂದು ಚಲುವರಾಯ ಸ್ವಾಮಿ ಪ್ರಶ್ನಿಸಿದರು.
ಅಂದು ಊಟ ಮಾಡುವಾಗ ವಿಡಿಯೋ ಸೆರೆ ಹಿಡಿದಿದ್ದಾರೆ. ಅಂದು ಯಾವುದೇ ರಾಜಕೀಯ ವಿಚಾರ ಚರ್ಚಿಸಿಲ್ಲ. ಹೈಕಮಾಂಡ್ ಹೇಳಿತ್ತು ಪಕ್ಷೇತರ ಅಭ್ಯರ್ಥಿ ಪರ ಕೆಲಸ ಮಾಡಬಾರದು ಎಂದು. ಹೀಗಾಗಿ ನಾವು ಯಾರೂ ಸಹ ಸುಮಲತಾ ಅಂಬರೀಶ್ ಅವರ ಪರ ಅಧಿಕೃತವಾಗಿ ಅಥವಾ ಬಹಿರಂಗವಾಗಿ ಪ್ರಚಾರ ಮಾಡಿಲ್ಲ. ಮಂಡ್ಯ ಲೋಕಸಭೆ ಚುನಾವಣೆ ಮುಗಿದಿದೆ, ಇಲ್ಲಿನ ಚುನಾವಣೆಯನ್ನ ಜನರಿಗೆ ಬಿಟ್ಟಿದ್ದೇವೆ ಎಂದರು.
ಇನ್ನು ಮೈಸೂರಿನಲ್ಲಿ ಜೆಡಿಎಸ್ ನ ಎಲ್ಲಾ ಮುಖಂಡರ ಜತೆ ಚರ್ಚಿಸಿ ಮೈಸೂರು –ಕೊಡಗು ಮೈತ್ರಿ ಅಭ್ಯರ್ಥಿ ಹಾಕಿದ್ದವು. ಹೀಗಾಗಿ ಅಲ್ಲಿ ವ್ಯತ್ಯಾಸವಾದರೇ ಜೆಡಿಎಸ್ ಮೇಲೆ ಹೊಣೆ ಹಾಕಬಹುದು ಎಂದು ಮಾಜಿ ಶಾಸಕ ಚಲುವರಾಯ ಸ್ವಾಮಿ ತಿಳಿಸಿದರು.
Key words: Sumalatha Ambareesh- meeting – leaders- Former MLA –Chaluvaraswamy- clarified