ಬೆಂಗಳೂರು, ಮಾರ್ಚ್ 03, 2020 (www.justkannada.in): ‘ರಾಜ ವೀರ ಮದಕರಿ ನಾಯಕ ‘ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಮತ್ತೊಂದು ಐತಿಹಾಸಿಕ ಚಿತ್ರ. ಇದರಲ್ಲಿ ಸಂಸದೆ ಸುಮಲತಾ ಕೂಡ ನಟಿಸಲಿದ್ದಾರೆ.
ಹೌದು. ಎರಡನೇ ಹಂತದ ಶೂಟಿಂಗ್’ನಲ್ಲಿ ಸಂಸದೆ ಸುಮಲತಾ ಅಂಬರೀಶ್ ಭಾಗಿಯಾಗಲಿದ್ದಾರೆ. ರಾಜಮಾತೆ ಪಾತ್ರದಲ್ಲಿ ಕಾಣಿಸಿಕೊಳ್ತಿರೋ ಸುಮಲತಾ ಅಂಬರೀಶ್ ಸದ್ಯದಲ್ಲಿಯೇ ಚಿತ್ರತಂಡ ಸೇರ್ಪಡೆಯಾಗಲಿದ್ದಾರೆ.
ಸದ್ಯ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ನಡೆಯಲಿದ್ದು , ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಪಿ ರವಿಶಂಕರ್ ಮತ್ತು ದೊಡ್ಡಣ್ಣ ಅಭಿನಯಿಸಲಿದ್ದಾರೆ .
ಉಳಿದ ತಾರಾ ಬಳಗವನ್ನ ಸದ್ಯದಲ್ಲಿಯೇ ಚಿತ್ರತಂಡ ರಿವೀಲ್ ಮಾಡಲಿದೆ. 10 ದಿನ ಕೇರಳದಲ್ಲಿ ಶೂಟಿಂಗ್ ಮುಗಿಸಿರೋ ಚಿತ್ರತಂಡ , ಈಗ ಹೈದರಾಬಾದ್ ನಲ್ಲಿ ಬಿಡುಬಿಟ್ಟಿದೆ .