ಬೆಂಗಳೂರು,ಫೆಬ್ರವರಿ,6,2025 (www.justkannada.in): ರಾಜ್ಯದಲ್ಲಿರುವುದು 60 % ಸರ್ಕಾರ. ಎಲ್ಲಾ ಸಚಿವರು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಮಾಜಿ ಸಚಿವ ಸುನೀಲ್ ಕುಮಾರ್ ಆರೋಪಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಸುನೀಲ್ ಕುಮಾರ್, ರಾಜ್ಯದಲ್ಲಿರುವುದು ದಪ್ಪ ಚರ್ಮದ ಸರ್ಕಾರ. ಇದು ಸಂವೇದನಶೀಲತೆ ಇಲ್ಲದ ಭಂಡ ಸರ್ಕಾರ. ಮೈಕ್ರೋ ಫೈನಾನ್ಸ್ ಆರ್ಭಟ ಜೋರಾಗಿದೆ. ಇದಕ್ಕೆ ಸರ್ಕಾರ ಕಡಿವಾಣ ಹಾಕುತ್ತಿಲ್ಲ ಎಂದು ಕಿಡಿಕಾರಿದರು.
ರಾಜ್ಯದಲ್ಲಿರುವುದು 60 ಪರ್ಸೆಂಟ್ ಸರ್ಕಾರ ಎಲ್ಲಾ ಸಚಿವರು ಹಗರಣದಲ್ಲಿ ಭಾಗಿಯಾಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಬ್ರೋಕರ್ ಗಳಾಗಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಗೂ ಹಣ ಹೋಗಿದೆ. ಅಬಕಾರಿ ಇಲಾಖೆ ಹಣ ದೆಹಲಿ ಮಹಾರಾಷ್ಟ್ರಕ್ಕೆ ಹೋಗಿದೆ ಎಂದು ಆರೋಪಿಸಿದರು.
Key words: 60% government, state, Sunil Kumar