ಗೂಗಲ್ ಟ್ರೆಂಡ್ ನಲ್ಲಿ ಈ ವರ್ಷವೂ ಟಾಪ್ ಪಟ್ಟಕ್ಕೇರಿದ ಹಾಟ್ ಬೆಡಗಿ: ಪ್ರಧಾನಿ ಮೋದಿ, ನಟರಾದ ಶಾರುಖ್, ಸಲ್ಮಾನ್ ರನ್ನೂ ಹಿಂದಿಕ್ಕಿದ ಸನ್ನಿ ಲಿಯೋನ್

ನವದೆಹಲಿ:ಆ-13:(www.justkannada.in) ಬಾಲಿವುಡ್ ಹಾಟ್ ನಟಿ ಸನ್ನಿ ಲಿಯೋನ್ ಈ ಬಾರಿ ಕೂಡ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಿದ ಭಾರತದ ಸೆಲೆಬ್ರಿಟಿಯಾಗಿ ಹೊರಹೊಮ್ಮಿದ್ದಾರೆ. ಗೂಗಲ್ ಟ್ರೆಂಡ್‌ನಲ್ಲಿ ಈ ವರ್ಷ ಪ್ರಧಾನಿ ಮೋದಿ, ನಟರಾದ ಶಾರುಖ್ ಖಾನ್, ಸಲ್ಮಾನ್ ಖಾನ್‌ರನ್ನೂ ಹಿಂದಿಕ್ಕಿ ಟಾಪ್‌ನಲ್ಲಿದ್ದಾರೆ.

ಗೂಗಲ್ ಟ್ರೆಂಡ್ ಅನಾಲಿಟಿಕ್ಸ್ ಪ್ರಕಾರ, ಸನ್ನಿ ಬಯೋಪಿಕ್ ಸೀರೀಸ್ ‘ಕರಂಜಿತ್ ಕೌರ್: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಸನ್ನಿ ಲಿಯೋನ್‌’ಗೆ ಬದಲಾಗಿ ಅವರ ವೀಡಿಯೊಗಳಿಗಾಗಿ ಅತ್ಯಧಿಕ ಸಂಖ್ಯೆಯಲ್ಲಿ ಮುಗಿಬಿದ್ದು ಸರ್ಚ್ ಮಾಡಿರುವುದು ವಿಶೇಷ.

ಅತಿ ಹೆಚ್ಚು ಮಂದಿ ಸನ್ನಿ ಲಿಯೋನ್ ವೀಡಿಯೊಗಳನ್ನು ಹುಡುಕಾಡಿರುವುದು ಈಶಾನ್ಯ ರಾಜ್ಯಗಳಾದ ಮಣಿಪುರ ಮತ್ತು ಅಸ್ಸಾಂನಿಂದ ಎಂಬುದು ಗಮನಾರ್ಹ ಸಂಗತಿ.

ಈ ವರ್ಷವೂ ಕೂಡ ಗೂಗಲ್ ಟ್ರೆಂಡ್ ನಲ್ಲಿ ನಂಬರ್ ಒನ್ ಸ್ಥಾನ ಉಳಿಸಿಕೊಂಡಿರುವ ಬಗ್ಗೆ ಸನ್ನಿ ಲಿಯೋನ್ ಪ್ರತಿಕ್ರಿಯೆ ನೀಡಿದ್ದು, ಈ ಸಂಗತಿಯನ್ನು ನನ್ನ ತಂಡ ನನ್ನ ಗಮನಕ್ಕೆ ತಂದಿದೆ. ಇದು ಮರೆಯಲಾಗದ ಅನುಭವ. ನನಗಾಗಿಯೇ ನಿರಂತರವಾಗಿ ಇರುವ ನನ್ನ ಅಭಿಮಾನಿಗಳಿಗೆ ನಾನು ಈ ಕ್ರೆಡಿಟ್ ಅರ್ಪಿಸುತ್ತೇನ ಎಂದು ಸಂತಸ ಹಂಚಿಕೊಂಡಿದ್ದಾರೆ.

ಗೂಗಲ್ ಟ್ರೆಂಡ್ ನಲ್ಲಿ ಈ ವರ್ಷವೂ ಟಾಪ್ ಪಟ್ಟಕ್ಕೇರಿದ ಹಾಟ್ ಬೆಡಗಿ: ಪ್ರಧಾನಿ ಮೋದಿ, ನಟರಾದ ಶಾರುಖ್, ಸಲ್ಮಾನ್ ರನ್ನೂ ಹಿಂದಿಕ್ಕಿದ ಸನ್ನಿ ಲಿಯೋನ್
Sunny Leone still the most Googled celebrity in India; surpasses PM Modi, Shah Rukh Khan, and Salman Khan