ಬೆಂಗಳೂರು, ಜನವರಿ 03, 2019 (www.justkannada.in): ಸೂಪರ್ ಸ್ಟಾರ್ ರಜನಿಕಾಂತ್ ದರ್ಬಾರ್ ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ಜನವರಿ 9 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.
ಕರ್ನಾಟಕದಲ್ಲೂ ದರ್ಬಾರ್ ಸಿನಿಮಾ ದೊಡ್ಡ ಮಟ್ಟದಲ್ಲಿ ತೆರೆಕಾಣುತ್ತಿದೆ. ಆದರೆ, ಮೆಜೆಸ್ಟಿಕ್ ನಲ್ಲಿರುವ ಕನ್ನಡ ಸಿನಿಮಾದ ಮುಖ್ಯ ಚಿತ್ರಮಂದಿರಕ್ಕೆ ರಜನಿಕಾಂತ್ ಸಿನಿಮಾ ಎಂಟ್ರಿಯಾಗಿರುವುದು ಅಚ್ಚರಿ ತಂದಿದೆ.
ಕೆಜಿ ರಸ್ತೆಯಲ್ಲಿರುವ ನರ್ತಕಿ ಚಿತ್ರಮಂದಿರದಲ್ಲಿ ದರ್ಬಾರ್ ಸಿನಿಮಾ ತೆರೆಕಾಣುತ್ತಿದೆ. ರಜನಿಕಾಂತ್ ನಟನೆಯ ದರ್ಬಾರ್ ಸಿನಿಮಾದ ತೆಲುಗು ವರ್ಷನ್ ಪ್ರದರ್ಶನವಾಗುತ್ತಿದೆ. ನರ್ತಕಿ ಚಿತ್ರಮಂದಿರಲ್ಲಿ ಪರಭಾಷೆ ಸಿನಿಮಾ ಬಿಡುಗಡೆಯಾಗುತ್ತಿರುವುದು ಬಹಳ ಅಪರೂಪವಾಗಿದೆ.