ಬೆಂಗಳೂರು,ಜ,23,2020(www.justkannada.in): ರಾಜ್ಯದಲ್ಲಿ ಮೂಢನಂಬಿಕೆ ನಿಷೇಧ ಕಾಯ್ದೆಯನ್ನ ಜಾರಿಗೆ ತರಲಾಗಿದ್ದು ಈ ಹಿನ್ನೆಲೆ ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ರೂಪಿಸಲಾಗಿದ್ದ ಮಾಟ ಮಂತ್ರ ಮತ್ತು ವಾಮಾಚಾರ ನಿಯಂತ್ರಿಸುವ ಮೂಢನಂಬಿಕೆ ನಿಷೇಧ ಕಾಯ್ದೆಯನ್ನ ಯಾವುದೇ ಬದಲಾವಣೆಯಿಲ್ಲದೇ 2020 ರ ಜನವರಿ 4 ರಿಂದ ಜಾರಿಗೆ ಬರುವಂತೆ ರಾಜ್ಯ ಬಿಜೆಪಿ ಸರ್ಕಾರವು ಅಧಿಸೂಚನೆ ಹೊರಡಿಸಿದೆ.
ಈ ಕುರಿತು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ನಾವು ಮೌಢ್ಯನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಹೊರಟಾಗ ನಮ್ಮನ್ನು ನಿಂದಿಸಿ,ಪೀಡಿಸಿ ಅಪಪ್ರಚಾರ ಮಾಡಿ, ಅದನ್ನು ತಡೆಯಲು ಪ್ರಯತ್ನಿಸಿದ್ದ ರಾಜ್ಯ ಬಿಜೆಪಿ ಈಗ ತಪ್ಪನ್ನು ತಿದ್ದಿಕೊಂಡು ಕಾಯ್ದೆಯನ್ನು ಜಾರಿಗೆ ತಂದದ್ದಕ್ಕೆ ಅಭಿನಂದನೆಗಳು. ಈಗಿನ ‘ನಂಬಿಕೆ’ ಒತ್ತಡಕ್ಕೆ ಬಾಗಿ ‘ಮೂಢನಂಬಿಕೆ’ ಆಗದಿರಲಿ ಎಂದ ಟ್ವೀಟ್ ಮಾಡಿದ್ದಾರೆ.
Key words: Superstition -Prohibition Act- Former CM- Siddaramaiah -congratulated – state government -Twitter